ಬೆಳ್ತಂಗಡಿಯಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ಮೃತ್ಯು

accident-15
Published on

ಮಂಗಳೂರು: ನಾರಾವಿ ಚರ್ಚ್ ರೋಡ್ ಬಳಿ ನಾರಾವಿ-ಕಾರ್ಕಳ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಪಾದಚಾರಿ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಮನೆ ನಿವಾಸಿ ಮಹೇಶ ಎಂಬುವರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.


ರಾತ್ರಿ ಸುಮಾರು 10.50ಕ್ಕೆ ನಾರಾವಿ ಗ್ರಾಮದ ನಾರಾವಿ ಚರ್ಚ್ ರೋಡ್ ಬಳಿ ನಾರಾವಿ-ಕಾರ್ಕಳ ರಸ್ತೆಯಲ್ಲಿ ಕಾರು ಚಾಲಕ ಚೇತನ್ ರಾಜ್ ಎಂಬಾತ ಕಾರ್ಕಳ ಕಡೆಯಿಂದ ನಾರಾವಿ ಕಡೆಗೆ ನಿರ್ಲಕ್ಷೃದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಮನೆ ನಿವಾಸಿ ಮಹೇಶ, ಬಬಿತಾ ಹಾಗೂ ಅವರ ಪತಿ ಸುಧಾಕರ ಪೂಜಾರಿ ಎಂಬುವರಿಗೆ ಡಿಕ್ಕಿಯಾಗಿದೆ. ಪರಿಣಾಮ ಮಹೇಶ ಅವರು ರಸ್ತೆಗೆ ಬಿದ್ದು ತೀವ್ರ ಗಾಯಗಳಾಗಿದ್ದು, ಕೂಡಲೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಮಹೇಶರವರು ಮೃತಪಟ್ಟಿರುವುದಾಗಿ ತಿಳಿಸಿದರು.


ಗಾಯಗೊಂಡಿರುವ ಬಬಿತಾ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾರು ಚಾಲಕ ಚೇತನ್ ರಾಜ್ ಮೇಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net