

ಕಾರ್ಕಳ: ಬೆಳ್ಮಣ್‌ನ ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಥಮ ವಾರ್ಷಿಕ ಮಹಾಸಭೆಯು ಭಾನುವಾರ ಮುಲ್ಲಡ್ಕ ನಾನಿಲ್ತಾರಿನ ಕುಲಾಲ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷ ಕುಶ ಆರ್.ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯ ನೋಟಿಸ್ ಓದಿ ಧೃಡೀಕರಿಸಲಾಯಿತು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಮಂಡಿಸಿ ಮಂಜೂರು ಮಾಡಲಾಯಿತು. ಲೆಕ್ಕಪರಿಶೋಧಕರ ನೇಮಕಾತಿ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಬೈಲಾ ತಿದ್ದುಪಡಿಗಳು ಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಯಿತು.
ಉಪಾಧ್ಯಕ್ಷ ಜಗನ್ನಾಥ ಮೂಲ್ಯ, ನಿರ್ದೇಶಕರಾದ ಜಯರಾಮ್ ಕುಲಾಲ್, ಬೊಗ್ಗು ಮೂಲ್ಯ ಬೇಲಾಡಿ, ಶಂಕರ್ ಮೂಲ್ಯ ಇನ್ನಾ, ಗೋಪಾಲ ಮೂಲ್ಯ, ಗಣೇಶ್ ಮೂಲ್ಯ, ರಾಜೇಶ್ ಕುಲಾಲ್ ಸಂತೂರ್, ದೀಪಕ್ ಕುಲಾಲ್, ಸುರೇಶ್ ಮೂಲ್ಯ, ನಂದಳಿಕೆ ಸುಗಂಧಿ ಮೂಲ್ಯ ಉಪಸ್ಥಿತರಿದ್ದರು. ನಿರ್ದೇಶಕ ರಮಾನಂದ ಮೂಲ್ಯ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ನಿರೂಪಿಸಿದರು. ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು. ಸುಶ್ಮಿತಾ ಹಾಗೂ ಆಶಾ ವರದಾರಾಜ್ ಸಹಕರಿಸಿದರು.