ಕನಕ ಗುರುಪೀಠಕ್ಕೆ ಗೃಹ ಸಚಿವರ ಭೇಟಿ

Davanagere Belludy, Kanaka Gurupith, Basavaraj Bommai, Kaginale, Niranjananandpuri Swamiji,
Published on

ಹರಿಹರ: ತಾಲೂಕಿನ ಬೆಳ್ಳೂಡಿಯ ಕನಕ ಶಾಖಾ ಮಠಕ್ಕೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ, ಕನಕ ಗುರುಪೀಠದ ಪೀಠಾಧಿಪತಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಬುಧವಾರ ಶಿಗ್ಗಾವಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯ ಮಠಕ್ಕೆ ಭೇಟಿ ನೀಡಿ, ಶ್ರೀಗಳೊಂದಿಗೆ ಕರೊನಾ ನಿಯಂತ್ರಣ, ಆರ್ಥಿಕ ಸಮತೋಲನ ಇನ್ನಿತರ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಬಳಿಕ ಬೆಂಗಳೂರಿಗೆ ತೆರಳಿದರು.

ಗ್ರಾಮಾಂತರ ಡಿವೈಎಸ್‌ಪಿ. ಮಂಜುನಾಥ್ ಗಂಗಲ್, ಸಿಪಿಐ ಶಿವಪ್ರಸಾದ್, ಪಿಎಸ್‌ಐ ಡಿ. ರವಿಕುಮಾರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net