ಭಕ್ತಿ-ಪ್ರೀತಿಯಿಂದ ದೇವರ ಸಾಕ್ಷಾತ್ಕಾರ : ವೆಂಕಟೇಶ್ ಅಭಿಮತ ದೇವರ ಛಾಯಾಬಿಂಬಕ್ಕೆ

New Project (23)
Published on

ಪುತ್ತೂರು ಗ್ರಾಮಾಂತರ: ದೇವರನ್ನು ಒಲಿಸಿಕೊಳ್ಳಲು ಭಕ್ತಿ ಮತ್ತು ಪ್ರೀತಿ ಬಹಳ ಮುಖ್ಯ. ದೇವರ ಮೇಲೆ ಸಂಪೂರ್ಣ ನಂಬಿಕೆ, ಶರಣಾಗತಿ ಇದ್ದರೆ ಮಾತ್ರ ಪೂಜಾಫಲ ಸಿಗಲು ಸಾಧ್ಯ ಎಂದು ಬೆಂಗಳೂರಿನ ವಿ.ಆರ್. ಇನ್ನೋವೇಟಿವ್ ಸೊಲ್ಯುಷನ್ ಸಂಸ್ಥೆ ಮುಖ್ಯಸ್ಥ ವೆಂಕಟೇಶ್ ಹೇಳಿದರು.

ಬೆಟ್ಟಂಪಾಡಿ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರ ಲೋಕಾರ್ಪಣೆ ಮತ್ತು ಶ್ರೀ ದೇವರ ಛಾಯಾಬಿಂಬ ಪ್ರತಿಷ್ಠಾಪನಾ ಮಹೋತ್ಸವ ಮೇ 28ರಿಂದ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ನಡೆದ ಶ್ರೀ ದೇವರ ಛಾಯಾಬಿಂಬಕ್ಕೆ ಭಕ್ತರಿಂದ ಬೆಳ್ಳಿ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸುನೀತಿ ನಾಗರಾಜನ್ ತಲೆಪ್ಪಾಡಿ ಬೆಳ್ಳಿ ಸಮರ್ಪಣೆಗೆ ಚಾಲನೆ ನೀಡಿದರು. ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ರಾವ್ ನಟ್ಟೋಜ ಧಾರ್ಮಿಕ ಶಿಕ್ಷಣಕ್ಕೆ ಚಾಲನೆ ನೀಡಿದರು. ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ, ಬೆಟ್ಟಂಪಾಡಿ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಪಾಣಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿರ್ದೇಶಕ ರಾಧಾಕೃಷ್ಣ ರೈ ಪಟ್ಟೆ ಮಾತನಾಡಿದರು. ಪ್ರಮುಖರಾದ ಹರೀಶ್ ಗೌಡ ಗುಮ್ಮಟೆಗದ್ದೆ, ಪ್ರಕಾಶ್ ಬೋರ್ಕರ್ ಕತ್ತಲೆಕಾನ, ಶಂಕರನಾರಾಯಣ ರಾವ್ ಪಾರ, ರಾವ ಪೂಜಾರಿ ಮರತ್ತಮೂಲೆ, ಹರೀಶ್‌ಕುಮಾರ್, ಮನಮೋಹನ, ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಶ್ರೀಕುಮಾರ್ ಭಟ್ ಅಡ್ಕತ್ತಿವಾರ್, ಸುರೇಂದ್ರ ಕಕ್ಕೂರು, ಗಣೇಶ್ ಪಂಬೆಜಾಲು, ದಿನೇಶ್ ಪಂಬೆಜಾಲು ಉಪಸ್ಥಿತರಿದ್ದರು.

ಪುನಃ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ವಂದಿಸಿದರು. ಶಿವಪ್ರಸಾದ್ ತಲಪ್ಪಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net