

ಶಿರಹಟ್ಟಿ: ಬೆಳ್ಳಟ್ಟಿ ಗ್ರಾಮದ ಬಿ.ಪಿ. ಅಳವಂಡಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಸಂಜನಾ ಓಲಿ ಶೇ. 93.83ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ, ರಾಜೇಶ್ವರಿ ಹೆಬ್ಬಳ್ಳಿ 89.33 ದ್ವಿತೀಯ, ಶಾಂತಾ ಕೊಂಡ್ರು 85.16 ತೃತೀಯ ಸ್ಥಾನ. ವಾಣಿಜ್ಯ ವಿಭಾಗ ಚೈತ್ರಾ ಕುರ್ತಕೋಟಿ 85.16 ಪ್ರಥಮ, ಸೌಮ್ಯಾ ಮೂಲಿಮನಿ 84 ದ್ವಿತೀಯ, ಸೌಮ್ಯಾ ನರಗುಂದ 82.66ರಷ್ಟು ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ ಸೌಮ್ಯಾ ಮೂಲಿಮನಿ, ಪ್ರಿಯಾಂಕಾ ಕಮ್ಮಾರ, ಶಿಕ್ಷಣಶಾಸ್ತ್ರ ವಿಷಯದಲ್ಲಿ ಶಾಂತ ಕೊಡ್ರು, ಯಶೋಧಾ ನಾವಿ, ಇತಿಹಾಸ ವಿಷಯದಲ್ಲಿ ಸಂಜನಾ ಓಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.