

ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಜರುಗಿತು.
ಶಿವಮೊಗ್ಗ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ, ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ತಾಲೂಕು ವೈದ್ಯಾಧಿಕಾರಿಗಳ ಸಂಘ, ತಿಮ್ಮರಡ್ಡಿ ಮರಡ್ಡಿ ಸ್ನೇಹ ಬಳಗ ಹಾಗೂ ಬೆಳ್ಳಟ್ಟಿ ಪ್ರಜಾ ಚೈತನ್ಯ ಫೌಂಡೇಷನ್ ಆಶ್ರಯದಲ್ಲಿ ಏರ್ಪಾಟಾಗಿದ್ದ ಶಿಬಿರವನ್ನು ನಾಗರಾಜ ಕುಲಕರ್ಣಿ ಉದ್ಘಾಟಿಸಿದರು.
ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಯ್ಯ ಹಿರೇಮಠ, ಮೋಹನ ಗುತ್ತೆಮ್ಮನವರ, ಕೊಟ್ರೆಶ ಸಜ್ಜನರ, ಮಹೇಶ ಬಡ್ನಿ, ಸುರೇಶ ಬೆಲಹುಣಶಿ, ಹೇಮಂತರೆಡ್ಡಿ ಅಳವಂಡಿ, ಯಲ್ಲಪ್ಪ ಒಳಗೇರಿ, ಗಿರೀಶರೆಡ್ಡಿ ಮೇಕಳಿ, ವೆಂಕಣ್ಣ ಡಂಬಳ, ವೆಂಕಟೇಶ ಬಸವರೆಡ್ಡಿ, ವಿಶ್ವನಾಥ ದಲಾಲಿ, ರಾಜೀವ ಮಾಂಡ್ರೆ, ಪರಸರಡ್ಡಿ ಮರಡ್ಡಿ, ಮಂಜುನಾಥ ಮಾಚೇನಹಳ್ಳಿ, ಪರಮೇಶಪ್ಪ ಕೋಡಿಹಳ್ಳಿ, ಯಲ್ಲನಗೌಡ ಪಾಟೀಲ, ಶ್ರೀನಿವಾಸ ಮರಡ್ಡಿ, ಸುರೇಶ ಬೇಂದ್ರೆ, ಅಶೋಕ ಬಾವನೂರ, ಪರಮೇಶಪ್ಪ ಬೂದಿಹಾಳ, ಸುನೀಲ ಬಣಗಾರ, ಚನ್ನವೀರಪ್ಪ ಸಜ್ಜನರ, ಪುಟ್ಟಯ್ಯ ಹಿರೇಮಠ ರಾಘ ಬಡಿಗೇರ, ಇತರರಿದ್ದರು.