ಯುವಕರು ಸದುಪಯೋಗ ಪಡಿಸಿಕೊಳ್ಳಿ

Published on

ಬಳ್ಳಾರಿ : ಜಿಲ್ಲೆಯ ಸುತ್ತಮುತ್ತಲಿನ ನೀರುದ್ಯೋಗ ಯುವಕರಿಗೆ ಉದ್ಯೋಗದ ಅವಕಾಶವಿದ್ದು ಎಲ್ಲರೂ ಸದುಪಯೋಗಪಡಿಸಕೊಳ್ಳಬೇಕು ಎಂದು ಬಿಪಿಎಸ್‌ಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್ ಹೇಳಿದರು.

ನಗರದ ಬಿಪಿಎಸ್‌ಸಿ ಶಾಲೆ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ನಿರುದ್ಯೋಗ ಯುವಕ ಯುವತಿಯರಿಗಾಗಿ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಈವರೆಗೂ ಹಲವಾರು ವಿಶೇಷಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಸಹಕಾರ ಸಂಸ್ಥೆ ಮಾಡಿದೆ. ಮುಂಬರುವ ದಿನಗಳಲ್ಲಿ ವಿದ್ಯಾ ಸಂಸ್ಥೆಯಿಂದ ಸಹಾಯ ಸಹಕಾರವನ್ನು ಸಂಸ್ಥೆಗೆ ನೀಡುವುದು ಎಂದು ಹೇಳಿದರು.

ಬಿಬಿಸಿ ಕಾಲೇಜು ನಿರ್ದೇಶಕ ಅಮರರಾಜ್ ಭೂಪಾಲ್, ಸಮರ್ಥನಂ ಅಂಗವಿಕಲರ ಸಂಸ್ಥೆ ನಿರ್ದೇಶಕಿ ಡಾ. ರೇಣುಕಾದೇವಿ ಎಂ. ಕಠಾರಿಯಾ ಮಾತನಾಡಿದರು.

ಈ ಉದ್ಯೋಗ ಮೇಳದಲ್ಲಿ 20 ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿದವು. 400ಕ್ಕು ಹೆಚ್ಚು ಯುವಕರು ಮೇಳದ ಸದ್ವಿನಿಯೋಗ ಪಡೆದುಕೊಂಡರು. ಒಟ್ಟಾರೆ 381 ಅಭ್ಯರ್ಥಿಗಳು ನೋಂದಣಿ ಪಡೆದಿದ್ದರು. ವಿವಿಧ ಕಂಪನಿಗಳಿಗೆ 114ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಲ್ಲದೆ, 50 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್‌ನಲ್ಲಿ ಕಾಯ್ದಿರಿಸಲಾಗಿದೆ.

ಸಂಸ್ಥೆಯ ಸಿಬ್ಬಂದಿಯಾದ ರಾಮಾಂಜನೇಯ, ಪವಿತ್ರರಾಜ್, ಕಿರಣ್ ಕುಮಾರ, ಭೀಮರೆಡ್ಡಿ, ರಾಧಿಕರಾಣಿ, ಕಾಡಸಿದ್ದ, ಎಚ್. ಗಣೇಶ ಇದ್ದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net