ಕ್ರೀಡೆಯಲ್ಲಿ ಯುವಕರು ಭಾಗವಹಿಸಿ

Published on

ಬಳ್ಳಾರಿ : ಪ್ರತಿಯೊಬ್ಬ ಯುವಕರು ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕುರುಗೋಡು ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಕ್ರೀಡೆಗಳು ಮಾಯವಾಗುತ್ತಿದ್ದು, ಯುವಕರು ಕೇವಲ ಮನರಂಜನೆಗಾಗಿ ಟಿ.ವಿ. ಕಂಪ್ಯೂಟರ್, ಮೊಬೈಲ್‌ಗಳಿಗೆ ದುಂಬಾಲು ಬಿದ್ದು ತಮ್ಮ ದೈಹಿಕ ದೃಡತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ, ವ್ಯಾಯಾಮದ ಜತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.

ಬಳಿಕ ಫೈನಲ್ ಪಂದ್ಯಾವಳಿ ಕುರುಗೋಡು ಕಿಂಗ್ಸ್ ತಂಡದ ವಿರುದ್ಧ ಯೂತ್ ಐಕಾನ್ ತಂಡ ಗೆಲವು ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net