ಕಾಲಂನಲ್ಲಿ ನಾಯಕ ಎಂಬುದಾಗಿ ಬರೆಸಿ

Published on

ಬಳ್ಳಾರಿ : ಹಿಂದುಳಿದ ವರ್ಗದಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಲ್ಮೀಕಿ ಸಮುದಾಯವು ಜಾತಿ ಕಾಲಂನಲ್ಲಿ ನಾಯಕ ಎಂಬುದಾಗಿ ಬರೆಸಬೇಕು ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾದ್ಯಕ್ಷ ತಿಮ್ಮಪ್ಪ ಜೋಳದರಾಶಿ ಕರೆ ನೀಡಿದರು.

ನಾಯಕ ಸಮುದಾಯದ ಸರ್ವ ಸದಸ್ಯರು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂ ನಲ್ಲಿ ನಾಯಕ ಹಾಗೂ ಉಪಜಾತಿ ಕಾಲಂ ನಲ್ಲಿ ಜಾತಿಗಳನ್ನು ಬರೆಸುವಂತೆ ಸಮೀಕ್ಷಾಧಿಕಾರಿಗಳಿಗೆ ತಿಳಿಸಬೇಕು ಎಂದರು. ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳ ಕಾಯ್ದಿರಿಸಿಕೊಳ್ಳಲು ಸಮುದಾಯದ ಸಮಗ್ರ ಶಕ್ತಿ ಏಕೀಕೃತವಾಗಿ ದಾಖಲಾಗುವುದು ಅಗತ್ಯ. ಸಮೀಕ್ಷೆಯಲ್ಲಿ ತಪ್ಪಾಗಿ ಬರೆಸಿಕೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ನಾಯಕ ಸಮುದಾಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಭದ್ರಪಡಿಸಲು ಈ ಸಮೀಕ್ಷೆ ಮುಖ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net