ಸಮೀಕ್ಷೆಯಲ್ಲಿ ಕುರುಬ ಬರೆಸಿ

Published on

ಬಳ್ಳಾರಿ : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕುರುಬ ಸಮುದಾಯವು ’ಕುರುಬ’ ಎಂದೇ ಬರೆಸಬೇಕು ಎಂದು ಮಾಜಿ ಉಪಮೇಯರ್ ಬೆಣಕಲ್ ಬಸವರಾಜ ಹೇಳಿದರು.

ಸಮುದಾಯವು ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಧರ್ಮ ಕಾಲಂನಲ್ಲಿ ’ಹಿಂದು’ ಹಾಗೂ ಜಾತಿ ಕಾಲಂನಲ್ಲಿ ’ಕುರುಬ’ ಎಂದು ಬರೆಸಬೇಕು. ಇದರಿಂದ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಇರುವ ಕುರುಬ ಸಮುದಾಯದ ನಿರ್ದಿಷ್ಟ ಜನಸಂಖ್ಯೆ ತಿಳಿಯಲಿದೆ. ಜತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಎಷ್ಟು ಪ್ರಮಾಣದಲ್ಲಿ ಸಮುದಾಯ ಅಭಿವೃದ್ಧಿಯಾಗಿದೆ ಎಂಬುದರ ಕುರಿತು ನಿಖರ ಅಂಕಿ ಸಂಖ್ಯೆಗಳ ಮಾಹಿತಿ ತಿಳಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net