ವಿಜ್ಞಾನದ ಬೆಳವಣಿಗೆಗೆ ವಿಸ್ಮಯಗಳೆ ಕಾರಣ

Published on

ಬಳ್ಳಾರಿ : ಕುತೂಹಲ, ಸಂಶೋಧನೆ ಮತ್ತು ವಿಸ್ಮಯಗಳೇ ವಿಜ್ಞಾನದ ಬೆಳವಣಿಗೆಗೆ ಕಾರಣಗಳು ಎಂದು ಕುಂದಾಪುರದ ವಿಜ್ಞಾನ ಸಾಹಿತ್ಯ ಬರಹಗಾರರಾದ ಎಚ್.ದಿವಾಕರ ಶೆಟ್ಟಿ ಹೇಳಿದರು.

ಇಲ್ಲಿನ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಡೂರಿನ ಬಸವ ಪಬ್ಲಿಕೇಷನ್ಸ್ ವತಿಯಿಂದ ಜಿಲ್ಲಾ ಕಸಾಪ ಸಹಯೋಗದಲ್ಲಿ ನಡೆದ ವಿಜ್ಞಾನ ಸಾಹಿತ್ಯ ಬರಹಗಾರ ಡಾ. ಯು.ಶ್ರೀನಿವಾಸ ಮೂರ್ತಿ ಬರೆದ `ವಿಜ್ಞಾನದಂಗಳ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬದಲಾಗುತ್ತಿರುವ ನಾಗರೀಕ ಸಮಾಜಕ್ಕೆ ಸಮಸ್ಯೆಗಳು ಉಂಟಾದಾಗ ಉತ್ತರ ನೀಡಬಲ್ಲ ಶಾಸ್ತಂದರೆ ವಿಜ್ಞಾನ. ವಿಜ್ಞಾನ ಭೂಮಿಯೊಳಗೆ, ಭುಮಿಯ ಮೇಲೆ ಮತ್ತು ಆಕಾಶದಲ್ಲೂ ಮಾನವನ ಬದುಕಿಗೆ ಸಿಗಬಲ್ಲ ಅನುಕೂಲಗಳನ್ನು ಹುಡುಕುತ್ತಿದೆ. ಇವತ್ತಿನ ಭಾರತೀಯ ವಿಜ್ಞಾನಿಗಳ ವ್ಯೋಮೋ ವಿಜ್ಞಾನದ ಸಾಧನೆಗೆ ವಿಶ್ವವೇ ಬೆರಗಾಗುತ್ತಿದೆ. ಅದಕ್ಕೆ ಪೂರಕವಾಗಿ ಇಂದು ಯುವ ಜನಾಂಗ ವಿಜ್ಞಾನದ ಓದನ್ನು ಹೆಚ್ಚು ಹೆಚ್ಚು ಆಯ್ಕೆ ಮಾಡಿಕೊಂಡು ಓದಬೇಕಿದೆ. ಇದಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಡಾ. ಯು.ಶ್ರೀನಿವಾಸ ಮೂರ್ತಿಯವರು `ವಿಜ್ಞಾನದಂಗಳ' ಪುಸ್ತಕವಿದೆ ಎಂದು ತಿಳಿಸಿದರು.

ಕೋವಿಡ್ 19ರ ಸಮಯದಲ್ಲಿ ನಾವೆಲ್ಲರೂ ಮನೆಯಲ್ಲಿ ಲಾಕ್ ಆದಾಗ, ಮಕ್ಕಳಿಗೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಮಾಡಬಹುದಾದ 26 ವಿಜ್ಞಾನದ ಪ್ರಯೋಗಗಳನ್ನು ಮಾಡುವ ವಿಧಾನ ವನ್ನು ವಿವರಿಸುತ್ತಾ, ಅಲ್ಲಿರುವ ವಿಜ್ಞಾನದ ತತ್ವ-ನಿಯಮಗಳನ್ನು ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿ, ಪತ್ರಿಕೆಗಳಿಗೆ ಬರೆದ ಆ ಎಲ್ಲ ಲೇಖನಗಳನ್ನು ಸೇರಿಸಿ ಪುಸ್ತಕ ರೂಪಕ್ಕೆ ತಂದು ಲೋಕಾರ್ಪಣೆಗೊಳಿಸುತ್ತಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶ್ವಂತರಾಜ್ ನಾಗಿರೆಡ್ಡಿ ಮಾತನಾಡಿ, ವಿಜ್ಙಾನದ ಬೆಳವಣಿಗೆ ಜೊತೆಗೆ ಪರಿಸರದ ಬಗೆಗಿನ ಕಾಳಜಿ ಅರಿಯುವ ಅಗತ್ಯತೆ ಇಂದಿನ ಯುವಜನತೆಗವೆ ಅಗತ್ಯವಿದೆ. ವಿಜ್ಞಾನ ಸದಾ ಮಾನವನ ಏಳ<ಇಗೆ ಬಯಸುತ್ತದೆ. ಆದರೆ, ವಿಜ್ಞಾನದ ಉತ್ಪನ್ನವಾದ ತಂತ್ರಜ್ಞಾನವನ್ನು ಜನರು ತಮಗವೆ ಅರಿವಿಲ್ಲದೇ ಅತಿಯಾಗಿ ಬಳಸುವುದರಿಂದ ಹೊಸ ಸಮಸ್ಯೆಗಳು ಉದಯವಾಗುತ್ತಿವೆ ಎಂದು ತಿಳಿಸಿದರು.

ವಿಚಾರವಾದಿ ಆದಿನಾರಾಯಣರೆಡ್ಡಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net