ಮಹಿಳೆಯರು ಆರೋಗ್ಯದ ಕಾಳಜಿವಹಿಸಿ

Published on

ಬಳ್ಳಾರಿ : ಪ್ರಸ್ತುತ ದಿನಗಳಲ್ಲಿ ಮಕ್ಕಳು ಪೌಷ್ಠಿಕ ತಾಯಿ ಹಾಲಿನ ಕೊರತೆಯಿಂದ ರೋಗಗಳಿಗೆ ಒಳಗಾಗುತ್ತಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಜತೆಗೆ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಐಎಂಎ, ಡಬ್ಲೂ, ಡಿಡಬ್ಲೂೃ ಮತ್ತು ಗೈನೋಕಾಲಜಿ ಸೊಸೈಟಿ, ಫ್ಯಾಮಿಲಿ ಪ್ಲಾೃನಿಂಗ್ ಅಸೋಸಿಯೇಷನ್ ಹಾಗೂ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ ಜಂಟಿಯಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಎಚ್‌ಪಿವಿ ಲಸಿಕೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಕುರಿತು ಹಲವಾರು ಮೂಢನಂಬಿಕೆಗಳು ನಮ್ಮಲ್ಲಿವೆ. ಹೆಣ್ಣು ಮಕ್ಕಳು ಜನಿಸುತ್ತಲೇ ಭಾರ ಎನ್ನುವ ಕಲ್ಪನೆ ಇಂದು ದೂರವಾಗಿದೆ. ಸ್ತಿಥ ಸಂಬಂಧಿತ ಮಾರಕ ರೋಗಗಳ ಕುರಿತು ಅವರಿಗೆ ಮಾಹಿತಿ ನೀಡುವುದು ಪ್ರಸ್ತುತ ದಿನಗಳಲ್ಲಿ ಅವಶ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಫ್ಯಾಮಿಲಿ ಪ್ಲಾೃನಿಂಗ್ ಇಂಡಿಯಾ ಅಧ್ಯಕ್ಷ ಟಿ.ಜಿ.ವಿಠ್ಠಲ್ ಮಾತನಾಡಿ, ರೋಗಗಳ ಕುರಿತು ಸಂಶೋಧನೆಗಳು ಹೆಚ್ಚಾದಷ್ಟು ರೋಗಗಳ ಸಂಖ್ಯೆಯು ಹೆಚ್ಚುತ್ತಿವೆ. ಹೊಸ ರೋಗಗಳಿಗೆ ಅನುಗುಣವಾಗಿ ಚಿಕಿತ್ಸಾ ಪದ್ದತಿಗಳು ಬದಲಾಗುತ್ತಿವೆ. ಕ್ಯಾನ್ಸರ್ ತಡೆಗಟ್ಟುವ ಕ್ರಮಗಳನ್ನು ನೀವು ತಿಳಿದು, ಇನ್ನೊಬ್ಬರಿಗೂ ತಿಳಿಸಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net