ಬಳ್ಳಾರಿ : ಮಹಿಳೆಯರು ವಿವಿಧ ರೀತಿಯ ಸ್ವ-ಉದ್ಯೋಗ ಕೈಗೊಳ್ಳಲು ಸೃಜನಾತ್ಮಕ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್‌ನ ಲೀಡ್ ಜಿಲ್ಲಾ ವ್ಯವಸ್ಥಾಪಕ ಗಿರೀಶ ವಿ. ಕುಲಕರ್ಣಿ ಹೇಳಿದರು.
ನಗರದಲ್ಲಿ ಕೆನರಾ ಬ್ಯಾಂಕ್ ಆವರಣದಲ್ಲಿ ಸಂಸ್ಥೆ ವತಿಯಿಂದ ಉಚಿತ ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಮಂಗಳವಾರ ಟೂಲ್‌ಕಿಟ್ ವಿತರಿಸಿ ಮಾತನಾಡಿದರು. ಮಹಿಳೆಯರು ಮನೆಯಲ್ಲಿ ಕುಳಿತು ಟೈಲರಿಂಗ್ ಮಾಡುವುದರಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈ ಹೋಲಿಗೆ ತರಬೇತಿ ಸಹಕಾರಿಯಾಗಲಿದೆ ಎಂದರು.
ನಿರ್ದೇಶಕ ರಾಜಸಾಬ್ ಎಚ್. ಎರಿಮನಿ ಮಾತನಾಡಿ, ಸಂಸ್ಥೆಯ ತರಬೇತಿಯಲ್ಲಿ ಕೌಶಲ್ಯದ ಜತೆಗೆ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನದ ಮಾಹಿತಿ ನೀಡಲಾಗುತ್ತಿದ್ದು, ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.