ಸಹಕಾರ ತತ್ವಕ್ಕೆ ಮಾದರಿಯಾದವರು

Published on

ಬಳ್ಳಾರಿ : ನಗರದಲ್ಲಿ ದಾರದ ಮಿಲ್ ಹಾಗೂ ಜನತಾ ಬಜಾರ್ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದರು ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಬಸವರಾಜ ಹೇಳಿದರು.

ಇಲ್ಲಿನ ರಾಘವ ಕಲಾ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ದಿ.ಎಚ್.ಲಿಂಗಾರೆಡ್ಡಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ಅಲ್ಲದೆ, ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ಮನೆಯಲ್ಲಿನ ಚಿನ್ನಾಭರಣವನ್ನು ಬಳಸಿಕೊಂಡು ಬೆಳೆಸಿದರು. ರಾಜಕೀಯದಿಂದ ಕುಟುಂಬದವರನ್ನು ದೂರವಿಟ್ಟಿದ್ದರು. ಇಂತಹವರು ಸದಾ ಸ್ಮರಣೀಯರು. ಇವರ ಬಗ್ಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್‌ದಿಂದ ಕಿರು ಪುಸ್ತಕ ತರಲು ಸಿದ್ಧವಿದೆ ಎಂದು ಹೇಳಿದರು.

ಬಳಿಕ ರಂಗ ಸಂಸ್ಕೃತಿ ವತಿಯಿಂದ ಪಿ.ವಿ.ಭವಾನಿ ಪ್ರಸಾದ ರಚನೆಯ ಲಾಲ್ರೆಡ್ಡಿ ನಿರ್ದೇಶನದ ಒಕ್ಕ ಮಾಟೆ ಚಾಲು ತೆಲುಗು ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net