ವಕ್ಫ್ ಬೋರ್ಡ್ ‌ಲ್ಯಾಂಡ್ ಜಿಹಾದ್

Published on

ಬಳ್ಳಾರಿ : ರಾಜ್ಯದಲ್ಲಿ ಸಚಿವ ಜಮೀರ್ ಅಹಮದ್ ವಕ್ಫ್ ಬೋಡ್೯ ಮೂಲಕ ಲ್ಯಾಂಡ್ ಜಿಹಾದ್ ಜಾರಿಗೆ ತಂದಿದ್ದಾರೆ ಎಂದು ರಾಜ್ಯ ಬಿಜೆಪಿ ‌ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾನೂನು ಬಳಸಿಕೊಳ್ಳುವ ಮೂಲಕ ಲ್ಯಾಂಡ್ ಜಿಹಾದ್ ಕಾಂಗ್ರೆಸ್ ಮಾಡುತ್ತಿದೆ. ಆಸ್ತಿ ಕಳೆದುಕೊಂಡವರಿಗೆ, ಬಡ ಮುಸ್ಲಿಂರಿಗೆ ವಕ್ಫ್ ಟ್ರಿಬುನಲ್ ನಲ್ಲಿ ನ್ಯಾಯ ಸಿಗುವ ಗ್ಯಾರಂಟಿ ಇಲ್ಲ. ತೋಳದ ಬಳಿ ಕುರಿ ಮರಿ ನ್ಯಾಯ ಕೇಳಿದಂತಾಗಲಿದೆ. ಕಾಂಗ್ರೆಸ್ ಸಂವಿಧಾನ ವಿರೋಧ ಅನುಸರಿಸುತ್ತಿದೆ. ವಿಪರ್ಯಾಸವೆಂದರೆ ಇಸ್ಲಾಮಿಕ್ ದೇಶಗಳಲ್ಲೂ ಈ ಕಾಯ್ದೆಯಿಲ್ಲ. ಕಾಂಗ್ರೆಸ್ ಗೆ ಸಂವಿಧಾನದ ಬಗ್ಗೆ ಗೌರವ, ವಿಶ್ವಾಸವಿದ್ದರೆ ಈ ಕಾಯ್ದೆಯನ್ನು ವಿರೋಧಿಸಬೇಕು. ರಾಜಕೀಯ ಕೊನೆ ಗಾಲದಲ್ಲಿರುವ ಸಿಎಂ ಸಿದ್ದರಾಮಯ್ಯ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸತ್ಯದ ಪರ ನಿಲ್ಲಬೇಕು. ಸಂವಿಧಾನ ವಿರೋಧಿ ಕಾಯ್ದೆ ರದ್ದಾಗಬೇಕು. ಈ ಅನ್ಯಾಯದ ಕಾಯ್ದೆ ವಿರುದ್ಧ ಡ್ರಾಫ್ಟ್ ಸಿದ್ಧಗೊಂಡಿದ್ದು, ಜಂಟಿ ಸಮಿತಿಯ ಮುಂದಿದೆ ಎಂದರು. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಪಂಚರ್ ಆಗಿದೆ. ಕೇವಲ ಹಬ್ಬ ಹರಿದಿನಗಳಿಗೆ ಸೀಮಿತವಾಗಿದೆ. ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ನಿಂತುಹೋಗಿವೆ. ಒಂದೂವರೆ ವರ್ಷದಲ್ಲಿ ದೂರ ದೃಷ್ಟಿ ಯೋಜನೆಗಳನ್ನು ರೂಪಿಸಿರುವ ಬಗ್ಗೆ ಜನರ ಮುಂದೆ ಇಡಲಿ. ಕಾಂಗ್ರೆಸ್ ವಿರುದ್ಧ ಜನ ಆಕ್ರೋಶದ ಜತೆಗೆ ಆ ಪಕ್ಷದ ಕೆಲ ಶಾಸಕರ ಆಕ್ರೋಶ ಸಹ ಇದೆ. ಈ ಎಲ್ಲದರ ಪರಿಣಾಮ ಚುನಾವಣೆ ಮೇಲೆ ಬೀರಲಿದೆ. ಜನ ದಾರಿ ತಪ್ಪಿರುವ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದರು. ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟ ಗೆಲ್ಲುವ ವಿಶ್ವಾಸವಿದೆ. ಈ ಚುನಾವಣೆ ಮೂರು ವಿಷಯಗಳನ್ನು ಆಧಾರಿಸಿ ನಡೆಸಲಾಗುತ್ತಿದೆ. ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನ ವಿರೋಧಿ ನೀತಿಯನ್ನು ಜನರ ಮುಂದಿಟ್ಟಿದೆ. ಭ್ರಷ್ಟಾಚಾರದಲ್ಲಿ ವಿಶ್ವಕಪ್ ಇಟ್ಟರೆ ಅದು ಕಾಂಗ್ರೆಸ್ ಪಾಲಿಗೆ ಸಿಗಲಿದೆ. ಸಿದ್ದರಾಮಯ್ಯ ಅವರು ಮಿಸ್ಟರ್ ಕರೆಪ್ಟ್ ಆಗಿ ಬದಲಾಗಿದ್ದಾರೆ. ವಾಲ್ಮೀಕಿ ನಿಗಮದ ಹಣ ಕಾಂಗ್ರೆಸ್ ಪಕ್ಷದ ಚುನಾವಣೆಗೆ ಬಳಕೆಯಾಗಿದೆ ಎಂದರು.

ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ‌ಮೋಕಾ, ಮುಖಂಡರಾದ ರಾಮಲಿಂಪ್ಪ, ಉಜ್ಬಲ, ಬಿ.ಕೆ. ಸುಂದರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net