ವಾಗ್ವದ

Published on

ಬಳ್ಳಾರಿ : ಸಂಡೂರಿನ ತಿಮ್ಮಲಾಪುರ ಗ್ರಾಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮನಕ್ಕೂ ಮುನ್ನ ರಸ್ತೆಯ ಬದಿಯಲ್ಲಿ ನಿಂತಿದ್ದ ವಾಹನವೊಂದು ತೆಗೆಯುವ ವಿಚಾರಕ್ಕೆ ಕುರುಗೋಡು ಸಿಪಿಐ ವಿಶ್ವನಾಥ ಹಿರೇಗೌಡ ಹಾಗೂ ತೋರಣಗಲ್ ಕಾನ್ಸ್ ಸ್ಟೇಬಲ್ ದುಂಡಪ್ಪ ನಡುವೆ ವಾಗ್ವದ ನಡೆಯಿತು. ಇಬ್ಬರು ಅಧಿಕಾರಿಗಳು ಜೋರು ಧ್ವನಿಯಲ್ಲಿಯೇ ಜಗಳ ಮಾಡಿಕೊಂಡರು. ಪೇದೆ ವರ್ತನೆಯ ಬಗ್ಗೆ ಸಿಪಿಐ ವಿಶ್ವನಾಥ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ‌ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪೇದೆ ಬಹಿರಂಗವಾಗಿಯೇ ಹೇಳಿದರು. ಇಬ್ಬರು ಅಧಿಕಾರಿಗಳನ್ನು ಸಿಬ್ಬಂದಿ ಸಮಾಧಾನಪಡಿಸಿದರು. ಜಾಲಿಬೆಂಚಿ ಗ್ರಾಮದಲ್ಲಿ ಪ್ರಚಾರ ಮುಗಿಸಿ ಊಟಕ್ಕೆ ತೆರಳುವೆ ವೇಳೆ ಕಾಂಗ್ರೆಸ್ ಕಾಂಗ್ರೆಸ್ ಯುವ ರಾಜ್ಯಾಧ್ಯಕ್ಷ ಮೊಹಮ್ಮದ್ ‌ನಲಪಾಡ್ ಹಾಗೂ ಸ್ಥಳಿಯ ಬಾಡಿಗಾರ್ಡ್ ನಡುವೆ ವಾಕ್ಸಮರ ನಡೆಯಿತು. ನೀನು ಯಾರು ಕಡೆಯವನು, ನಿನ್ನನ್ನು ನೋಡಿಕೊಳ್ಳುವೆ ಎಂದು ನಲಪಾಡ್ ಬಹಿರಂಗವಾಗಿ ಬಾಡಿಗಾರ್ಡ್ ಗೆ ದಮ್ಕಿ ಹಾಕಿದ ಘಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net