ವಿವಿ ರಂಗಮಂದಿರಕ್ಕೆ ಬೆಳಗಲ್ಲು ವೀರಣ್ಣ ಹೆಸರಿಡಿ

Published on

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರಕ್ಕೆ ನಾಡೋಜ ಬೆಳಗಲ್ಲು ವೀರಣ್ಣನವರ ಹೆಸರಿಡಬೇಕು ಎಂದು ವಿವಿಧ ಸಂಘಟನೆಗಳ ಮುಂಖಡರು ವಿವಿ ಕುಲಸಚಿವ ಎಸ್.ಎನ್.ರುದೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕನ್ನಡ-ತೆಲುಗು ರಂಗೂಮಿಯ ವಿಶ್ವವಿಖ್ಯಾತ ಮಹಾನ್ ಕಲಾಚೇತನ ನಾಟ್ಯಕಲಾ ಪ್ರಪೂರ್ಣಬಳ್ಳಾರಿ ರಾಘವರವರ ಸ್ಮರಣಾರ್ಥ ರಾಘವ ಕಲಾಮಂದಿರವಿದೆ. ನಾಟ್ಯಕಲಾತಪಸ್ವಿ ಗಮಕ ಕಲಾನಿ ಶ್ರೀಜೋಳದರಾಶಿ ದೊಡ್ಡನಗೌಡರ ಸ್ಮರಣಾರ್ಥ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಇದೆ. ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಬಯಲು ರಂಗ ಮಂದಿರಕ್ಕೆ ಸರ್ವ ಋತು ರಂಗಕೋಗಿಲೆ ಸಹಜಾಭಿವ್ಯಕ್ತಿಯ ಮಹಾನ್ ಅಭಿನೇತ್ರಿ ನಾಡೋಜ ಶ್ರೀಮತಿ ಸುದ್ರಮ್ಮ ಮನ್ಸೂರ್ ಅವರ ಹೆಸರಿಡಲಾಗಿದೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ತೊಗಲುಗೊಂಬೆಯಾಟ ಕಲಾವಿದ, ಕೇಂದ್ರ ಸಂಗೀತ ನಾಟಕ ವಿಭಾಗದ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿಗೆ ಭಾಜನರಾದ ಶ್ರೀಬೆಳಗಲ್ಲು ವೀರಣ್ಣನವರ ಹೆಸರಿಡಬೇಕು ಎಂದು ವಿವಿಧ ಸಂಘಟನೆಯ ಮುಖಂಡರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net