ವಿಮ್ಸ್‌ಗೆ ಅಧಿಕಾರಿಗಳಿಗೆ ಶ್ರೀರಾಮುಲು ವಾರ್ನಿಂಗ್

05022022 Bellary Sriramulu visit to vims
Published on

ಬಳ್ಳಾರಿ: ಅವ್ಯವಸ್ಥೆ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಶನಿವಾರ ಬೆಳಗ್ಗೆ ವಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡದೆ ವಿವಿಧ ವಾರ್ಡ್‌ಗಳಿಗೆ ತೆರಳಿದ ಸಚಿವ, ರೋಗಿಗಳ ಜತೆ ಮಾತನಾಡಿ ಸೌಲಭ್ಯಗಳ ಮಾಹಿತಿ ಪಡೆದರು. ಈ ವೇಳೆ ವಿಮ್ಸ್‌ನಲ್ಲಿದ್ದ ಅವ್ಯವಸ್ಥೆ ಕಂಡು ಕೋಪಗೊಂಡ ಶ್ರೀರಾಮುಲು, ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟರು. ಇದಾದ ಬಳಿಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಮತ್ತು ಬುಡಾ ಎದುರುಗಡೆಯ ಬೀದಿಬದಿಯ ವ್ಯಾಪಾರಿಗಳು ಹಾಗೂ ವ್ಯಾಪಾರ ಮಳಿಗೆಗಳು ಸ್ಥಾಪಿಸಲು ಉದ್ದೇಶಿಸಿದ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮುಂಡರಗಿ ಆಶ್ರಯ ವಸತಿ ಬಡಾವಣೆಗೆ ಭೇಟಿ ನೀಡಿ, ಆಶ್ರಯ ಮನೆಗಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಗೆ ಸಭೆ ನಡೆಸಿದರು.

ಹಿಜಾಬ್ ವಿವಾದ ಕುರಿತಂತೆ ಈಗಾಗಲೇ ಗೃಹ ಮಂತ್ರಿ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮದೇನು ಸಂಪ್ರದಾಯವಿದೆಯೊ ಅದನ್ನು ನಾವು ಉಳಿಸೋಣ. ಅದು ಹಿಜಾಬ್ ವಿಚಾರದಲ್ಲಾಗಲಿ ಅಥವಾ ಬೇರೆ-ಬೇರೆ ವಿಚಾರದಲ್ಲಾಗಲಿ.| ಬಿ.ಶ್ರೀರಾಮುಲು, ಸಾರಿಗೆ ಸಚಿವ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net