ವಿರೂಪಾಕ್ಷ, ವಿಷ್ಣುವಿನ ಶಿಲಾಶಾಸನ ಪತ್ತೆ

Published on

ಬಳ್ಳಾರಿ : ತಾಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರು ಪ್ರದೇಶದ ಶ್ರೀ ಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಂಪಿ ವಿರೂಪಾಕ್ಷ, ವಿಷ್ಣು ದೇವರ ಆರಾಧನೆ ಉಲ್ಲೇಖಿಸುವ ಮ್ಯಾಂಗನೀಸ್ ಶಿಲಾಶಾಸನ ಮಂಗಳವಾರ ಪತ್ತೆಯಾಗಿದೆ.

ಈ ಶಾಸನವು ಉತ್ತರಾಭಿಮುಖವಾಗಿದ್ದು, ಎಡ ಸೂರ್ಯ, ಬಲಕ್ಕೆ ಚಂದ್ರ ಹಾಗೂ ಮಧ್ಯೆದಲ್ಲಿ ಶಿವನಲಿಂಗದ ಚಿತ್ರಗಳಿವೆ. ಬಲಬದಿಯ ಚಂದ್ರನ ಬಳಿಯಲ್ಲಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ. ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ. ಆದರೂ ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರದ ಮಾರ್ಗಶಿರಾ ಕಾರ್ತಿಕ ಎಂದು ಉಲೇಖವಾಗಿರುದರಿಂದ ಇದು ಕ್ರಿ.ಶ. 10 ನೇ ಶತಮಾನದ ಎನ್ನಲಾಗಿದೆ. ಈ ಶಾಸನವು ನೆಲದಿಂದ 10 ಅಡಿ ಎತ್ತರದ ಮ್ಯಾಂಗನೀಸ್ ಕಲ್ಲಿಗೆ ಮೂರು ಅಡಿ ಎತ್ತರ, ಮೂರು ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಅಕ್ಷರಗಳನ್ನು ಬರೆಸಲಾಗಿದೆ. ದೇವಸ್ಥಾನದ ಅರ್ಚಕರ ಸಹಕಾರದೊಂದಿಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಲಾಗಿದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಇಂತಹ ಅಪರೂಪದ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ, ಇಲ್ಲವೇ ಆಡಳಿತಾಂಗವು ರಕ್ಷಣೆ ಮಾಡಲಿ ಎಂದು ಸಂಶೋಧನಾ ತಂಡ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net