ವಿವಿಧ ಕಾರ್ಯಕ್ರಮ ಆಯೋಜನೆ

Published on

ಬಳ್ಳಾರಿ : ಇಲ್ಲಿನ ಬಿಮ್ಸ್ ಆವರಣದಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ವಾರಾಚರಣೆ ನಿಮಿತ್ತ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಜಿಲ್ಲಾ ಶಾಖೆ ವತಿಯಿಂದ ಜೂ 11 ರಿಂದ ಜೂ 15 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಖೆಯ ಜಿಲ್ಲಾಧ್ಯಕ್ಷ ಡಾ.ಶೇಕಪ್ಪ ಮಾಳಗಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಮ್ಸ್ ಜೂ 11 ಸಸಿ ನೆಡುವ, ಜೂ 12 ಬೀದಿ ನಾಟಕ (ಸಾಮಾಜಿಕ ಕಳಕಳಿ), ಜೂ 13 ಉಚಿತ ತಪಸಾಣೆ/ ಶಸ್ತ್ರಚಿಕಿತ್ಸೆ(ನಗರದ ವೈದ್ಯರಿಂದ ಅವರವರ ಆಸ್ಪತ್ರೆಗಳಲ್ಲಿ ವೈಯಕ್ತಿಕ ಸಾಮರ್ಥ್ಯಕ್ಕೆನುಸಾರ ಅರ್ಹ ರೋಗಿಗಳಿಗೆ), ಜೂ 14 ಬೃಹತ್ ರಕ್ತದಾನ ಶಿಬಿರ, ಜೂ 15 ರಾಷ್ಟ್ರೀಯ ಶಸ್ತ್ರಚಿಕಿತ್ಸಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ರಾಷ್ಟ್ರೀಯ ಕಾರ್ಯದರ್ಶಿ ಡಾ.ಗಡ್ಡಿ ದಿವಾಕರ್, ಖಜಾಂಚಿ ಡಾ.ವೈ.ಬಸವನಗೌಡ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕಾಸಾ ಸೋಮಶೇಖರ್ ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net