ಯೂರಿಯಾ ಅಕ್ರಮ, ಐದು ಮಳಿಗೆಗಳ ಲೈಸನ್ಸ್ ರದ್ದು

Published on

ಬಳ್ಳಾರಿ : ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಕಂಪ್ಲಿ ತಾಲೂಕಿನ ಐದು ರಸಗೊಬ್ಬರ ಮತ್ತು ಪರಿಕರ ಮಾರಾಟ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ.

ಕುರುಗೋಡು ತಾಲೂಕಿನಲ್ಲಿ 54 ಯೂರಿಯಾ ಚೀಲವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೈತ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ವಾಹನ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ವಿವಿಧ ಮಳಿಗೆಗಳಲ್ಲಿ ಯೂರಿಯಾ ದಾಸ್ತಾನು ಇದ್ದರೂ ಇಲ್ಲ ಎಂಬುದಾಗಿ ಮಾಲೀಕರು ರೈತರಿಗೆ ಹೇಳುತ್ತಿದ್ದಾರೆ. ಆದ್ದರಿಂದ, ಯೂರಿಯಾ ಬಿಕ್ಕಟ್ಟು ನಿವಾರಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net