ಬಿಜೆಪಿಗೆ ಒಗ್ಗೂಟ್ಟಿನ ಮಂತ್ರ

Published on

ಬಳ್ಳಾರಿ : ಸಂಡೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಟಿಕೆಟ್ ವಂಚಿತ ಅಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿ ಪಕ್ಷೇತರರಾಗಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದರು. ಕೆಲ ಮುಖಂಡರನ್ನು ರಾಜ್ಯ ನಾಯಕರು ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಮಾಡುವುದಾಗಿ ಮನವರಿಕೆ ಮಾಡಿ ಪಕ್ಷದಲ್ಲಿಯೇ ಹಿಡಿದುಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಯಶ್ವಸಿಯಾಗಿದ್ದಾರೆ. ಇನ್ನೂ ಕೆಲವರು ರಾಜ್ಯ ನಾಯಕರ ಮಾತಿಗೆ ಮನ್ನಣೆ ನೀಡದೆ ನಾಮಪತ್ರ ಸಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಂಸದ ಈ. ತುಕಾರಾಮ್ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡುವುದು ಅಧಿಕೃತ ಘೋಷಣೆಯೊಂದೆ ಬಾಕಿಯಿದೆ. ಆದರೆ, ಕೆಲ ಅಸಮಾಧಾನಿತರು ಟಿಕೆಟ್ ಘೋಷಣೆಯಾದ ಬಳಿಕ ರೆಬಲ್‌ಯಾಗಿ ಸ್ಪರ್ಧಿಸಲು ತೆರೆಮರೆಯಲ್ಲಿ ಕಸರತ್ತು ನೆಡುಸುತ್ತಿರುವುದು ಪಕ್ಷದ ನಾಯಕರಿಗೆ ತಲೆನೋವು ತಂದಿದೆ. ಆದ್ದರಿಂದ, ಟಿಕೆಟ್ ಘೋಷಣೆಗೆ ಮುನ್ನ ಅಸಮಾಧಾನಿತರನ್ನು ಮನವೊಲಿಸಲು ಪಕ್ಷದಲ್ಲಿ ಉಳಿಸಿಕೊಳ್ಳಲು ನಾಯಕರು ಮನವರಿಕೆ ಮಾಡಲಾಗುತ್ತಿದೆ. ಕೇವಲ ಎರಡು ದಿನ ಮಾತ್ರ ನಾಮಪತ್ರ ಸಲ್ಲಿಕೆ ಅವಕಾಶವಿದ್ದು ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಪಡಿಸಿ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ಕಾಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net