ಬಳ್ಳಾರಿ ; ಕಳೆದ ಎರಡು ವರ್ಷದ ಹಿಂದೆ ವೈಯಕ್ತಿಕ ಸಾಲ ಮಾಡಿ ತೀರಿಸಲಾರದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಕೌಲಬಜಾರ್ ನಿವಾಸಿ ಮಂಜುನಾಥ (40)ಮೃತ. ಕಳೆದ ಎರಡು ವರ್ಷದ ಹಿಂದೆ ನಗರದ ವಿವಿಧಡೆ ಲಾರಿ ಖರೀದಿ ಹಾಗೂ ವೈಯಕ್ತಿಕ ಉದ್ದೇಶಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದಾನೆ. ಸಾಲ ಮರುಪಾವತಿಸದೆ ಇದ್ದರಿಂದ ಸಾಲಗಾರರ ಕಾಟಕ್ಕೆ ಬೇಸತ್ತು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.