ಆಟೋ ಪಲ್ಟಿ ಇಬ್ಬರ ಸಾವು

Published on

ತಾಲೂಕಿನ ಮದಿರೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸಿ ವಾಹನವು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ತಾಲೂಕಿನ ಕಲ್ಲುಕಂಭ ಗ್ರಾಮದ ಪರಮೇಶ (30), ಬಾದನಹಟ್ಟಿ ಗ್ರಾಮದ ರಂಗಪ್ಪ (40)ಮೃತರು. ರಾತ್ರಿ ವೇಳೆ ಕುರುಗೋಡು ಪಟ್ಟಣದಿಂದ ಕೋಳೂರು ಕ್ರಾಸ್ ತೆರಳುವಾಗ ಚಾಲನೆ ಸಂದರ್ಭದಲ್ಲಿ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net