ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೊರಟಿದ್ದ ಇಬ್ಬರು ತೆಪ್ಪ ಮಗುಚಿ ನೀರು ಪಾಲು

water death
Published on

ಬಳ್ಳಾರಿ: ನದಿಯಲ್ಲಿ ತೆಪ್ಪ ಮಗುಚಿದ ಪರಿಣಾಮ ಮದುವೆಗೆ ಆಹ್ವಾನಿಸಲು ಹೊರಟಿದ್ದ ಇಬ್ಬರು ಯುವಕರು ಭಾನುವಾರ ನೀರುಪಾಲಾಗಿದ್ದಾರೆ. ಫಕ್ರುದ್ದೀನ್ (28) ಮತ್ತು ಯಮುನೂರಪ್ಪ (17) ಮೃತ ದುರ್ದೈವಿಗಳು.

ಹಗರಿಬೊಮ್ಮನಹಳ್ಳಿ ತಾಲೂಕು ಸೀಗನಹಳ್ಳಿ ಗ್ರಾಮದ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ದುರಸ್ತಿಯಿದ್ದ ತೆಪ್ಪದ ಮೂಲಕ ಕೊಪ್ಪಳದ ಕಡೆ ಹೊರಟಾಗಲ್ಲಿ ಘಟನೆ ಜರುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದರಲ್ಲಿ ಫಕ್ರುದ್ದೀನ್ ಮದುವೆ ನಿಗದಿಯಾಗಿತ್ತು. ಹೊಸಪೇಟೆ ತಾಲೂಕಿನ ಕಾದಿಗನೂರು ಸಮೀಪದ ಡಿ.ಜಿ.ಕ್ಯಾಂಪ್ ನಿವಾಸಿ ಯಮನೂರಪ್ಪನನ್ನು ಕರೆದುಕೊಂಡು ಮದುವೆ ಕಾರ್ಡ್ ನೀಡಲು ಹೊರಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net