ತುಂಗಭದ್ರಾ ಜಲಾಶಯ ಭರ್ತಿಗೆ ಹನ್ನೊಂದೇ ಅಡಿ ಬಾಕಿ: ಒಂದೇ ದಿನ 8.5 ಟಿಎಂಸಿ ಅಡಿ ಒಳಹರಿವು

09082020 Hosapete TB Dam
Published on

ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ಒಳಹರಿವು ಹೆಚ್ಚಾಗಿದ್ದು, ಭಾನುವಾರ 8.5 ಟಿಎಂಸಿ ಅಡಿ ನೀರು ಬಂದಿದೆ. ಜಲಾಶಯದಲ್ಲಿ 1621.75 ಅಡಿ (ಗರಿಷ್ಠ ಮಟ್ಟ 1633 ಅಡಿ) ನೀರಿದೆ. ಭರ್ತಿಯಾಗಲು ಕೇವಲ 11.25 ಅಡಿ ಬಾಕಿ ಉಳಿದಿದೆ.

ಕಳೆದ ವರ್ಷಕ್ಕಿಂತ (60.720 ಟಿಎಂಸಿ ಅಡಿ) ಈ ಬಾರಿ ಹೆಚ್ಚು ಪ್ರಮಾಣದಲ್ಲಿ (63.102 ಟಿಎಂಸಿ ಅಡಿ) ಒಳಹರಿವು ಹೆಚ್ಚಾಗಿದೆ. ಜಿಲ್ಲೆಯ ಹೂವಿನ ಹಡಗಲಿ, ಕಂಪ್ಲಿ, ಸಿರಗುಪ್ಪ ತಾಲೂಕಿನ ನದಿಪಾತ್ರದ ಜನರಿಗೆ ಡಂಗೂರ ಸಾರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net