ಏ.10ರತನಕ ಕಾಲುವೆಗೆ ನೀರು: ಬಳ್ಳಾರಿಯಲ್ಲಿ ಸಚಿವ ಆನಂದ ಸಿಂಗ್ ಹೇಳಿಕೆ

Hospet Minister Anand Singh
Published on

ಬಳ್ಳಾರಿ: ಎರಡನೇ ಬೆಳೆಗೆ ಅನುಕೂಲವಾಗುವಂತೆ ಏ.10ರವರೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.ಆದ್ದರಿಂದ ರೈತರು ಗೊಂದಲಕ್ಕೀಡಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.

ನಗರದ ವಿಮ್ಸ್ ಆವರಣದ ವಸತಿ ನಿಲಯಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ವಾತನಾಡಿದರು. ರಾಜ್ಯದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಸಾಮಾನ್ಯವಾಗಿ ಯಾವ ಸರ್ಕಾರ ಇರುತ್ತದೆಯೋ ಆ ಪಕ್ಷದ ಅಭ್ಯರ್ಥಿ ಗೆಲ್ಲೋದು ವಾಡಿಕೆ. ಈಗಲೂ ಬಿಜೆಪಿ ನಿರಾಯಾಸವಾಗಿ ಜಯಗಳಿಸಲಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ನಗರ ಶಾಸಕ ಗಾಲಿ ಸೋಮಶೇಖರ್‌ರೆಡ್ಡಿ ನೋಡಿಕೊಳ್ಳಲಿದ್ದಾರೆ ಎಂದರು.

ವಿಮ್ಸ್ ಆವರಣವನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟರೆ ವಿರೋಧಿಸುತ್ತೇನೆ. ಖಾಸಗಿಯವರಿಗೆ ಈಗಾಗಲೇ ಲೀಜ್‌ಗೆ ಕೊಟ್ಟಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಆ ರೀತಿಯಾಗಿದ್ದರೆ ಅದನ್ನು ರದ್ದುಪಡಿಸುತ್ತೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net