ಬುಡಕಟ್ಟು ಸಮುದಾಯಕ್ಕೆ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಲಿ: ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ವೈ.ಶಿವಕುಮಾರ್ ಒತ್ತಾಯ

29012021 bellary y shivakumar
Published on

ಬಳ್ಳಾರಿ: ಅಲೆಮಾರಿ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ 800 ಕೋಟಿ ರೂ. ಮೀಸಲಿಡಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ವೈ.ಶಿವಕುಮಾರ್ ಒತ್ತಾಯಿಸಿದರು.

ಸಚಿವ ಶ್ರೀರಾಮುಲು 74 ಅಲೆಮಾರಿ ಸಮುದಾಯಗಳ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಮುಂದಿನ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂ. ಮೀಸಲು ಜತೆ ರಾಜ್ಯಾದ್ಯಂತ ಅಲೆಮಾರಿಗಳನ್ನು ಗುಡಿಸಲು ಮುಕ್ತಗೊಳಿಸಿ ನಿವೇಶನ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಪ್ರಾತಿನಿಧ್ಯ ಕೊಡಬೇಕು. ಕಳೆದ ಮೂರು ತಿಂಗಳ ಹಿಂದೆ 4800 ನಿವೇಶನ ಅರ್ಜಿಗಳನ್ನು ನೀಡಲಾಗಿದ್ದು, ಶೀಘ್ರವಾಗಿ ನಿವೇಶನ ಮಂಜೂರು ಮಾಡಬೇಕು. ಕಡೆಗಣಿಸಿದಲ್ಲಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸದಸ್ಯರಾದ ರಮಣಪ್ಪ, ಡಿ.ರಂಗಯ್ಯ, ರಾಮಸ್ವಾಮಿ, ಶೇಕ್ಷವಲಿ, ಜಿ.ರಾಮಯ್ಯ, ಶೇಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net