ನಿಧಿ ಆಸೆ, ಅಭರಣ ವಂಚನೆ

Published on

ಬಳ್ಳಾರಿ : ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಿಧಿ ದೊರಕಿಸುವುದಾಗಿ ನಂಬಿಸಿ ಎರಡು ಕುಟುಂಬಗಳಿಗೆ 22.90 ಲಕ್ಷ ರೂ. ಮೌಲ್ಯದ ಅಭರಣ ವಂಚಿಸಲಾಗಿದ್ದು, ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಕಳೆದ ಆಗಸ್ಟ್‌ನಲ್ಲಿ ಹೊನ್ನೂರಸ್ವಾಮಿಯೂ ಶಿವಪ್ಪನನ್ನು ದೂರುದಾರಿಗೆ ಪರಿಚಯಿಸಿದ್ದ. ನಿಮ್ಮ ಮನೆಯಲ್ಲಿ ನಿಧಿ ಇದೆ. ಪೂಜೆ ಮಾಡಿ ಅದನ್ನು ತೆಗೆದುಕೊಡುವೆ’ ಎಂದು ಎರಡೂ ಕುಟುಂಬಗಳನ್ನು ಶಿವಪ್ಪ ನಂಬಿಸಿದ್ದ. ಪೂಜೆ ಸಾಮಗ್ರಿಗಳನ್ನು ತಮಿಳುನಾಡಿನ ಕೊಯಮ್ಮತ್ತೂರಿನಿಂದ ತರಬೇಕು ಎಂಬುದಾಗಿ ಐದು ಲಕ್ಷ ರೂ. ಕ್ಕಿಂತಲೂ ಅಧಿಕ ಹಣ ಪಡೆದಿದ್ದ. ಬಳಿಕ ಎರಡೂ ಮನೆಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ಪೂಜೆ ಆರಂಭಿಸಿದ್ದ. ಪೂಜೆಗೆ ಮನೆಯಲ್ಲಿರುವ ಚಿನ್ನವನ್ನೆಲ್ಲ ಇಡಬೇಕು ಎಂದು ತಿಳಿಸಿದ್ದ. ಚಿನ್ನಾಭರಣವನ್ನು ಆತನ ಕೈಗಿಟ್ಟಿದ್ದರು. ಆದರೆ, ಪೂಜೆ ನೆಪದಲ್ಲಿ ಶಿವಪ್ಪ ಅವುಗಳನ್ನು ಕದ್ದಿದ್ದಾನೆ ಎನ್ನಲಾಗಿದೆ. ಒಟ್ಟಾರೆ ಆರೋಪಿಗಳು ಒಂದು ಕುಟುಂಬಕ್ಕೆ 15.65 ಲಕ್ಷ ರೂ. ಹಾಗೂ ಮತ್ತೊಂದು ಕುಟುಂಬಕ್ಕೆ 7.25 ಲಕ್ಷ ರೂ. ವಂಚಿಸಿರುವುದಾಗಿ ಶಿವಪ್ಪ ಹಾಗೂ ಹೊನ್ನುರಸ್ವಾಮಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net