ಹದಿನೈದು ಸಾವಿರ ಕಿಂಟ್ವಾಲ್ ಜೋಳ ಸಾಗಣೆ

Published on

ಬಳ್ಳಾರಿ : ಕಳೆದ ಒಂದು ವರ್ಷದಿಂದ ಇಲ್ಲಿನ ಬಂಡಿಮೋಟ ಬಳಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಸಂಗ್ರಹಿಸಿದ್ದ 15 ಸಾವಿರ ಕಿಂಟ್ವಾಲ್ ಜೋಳವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶದಂತೆ ಸಾರ್ವಜನಿಕರಿಗೆ ವಿತರಣೆ ಮಾಡುವ ಉದ್ದೇಶದಿಂದ ವಿಜಯನಗರ ಹಾಗೂ ನಗರದ ವಿವಿಧ ಗೋದಾಮುಗಳಿಗೆ ಸರಬರಾಜು ಮಾಡಲಾಗಿದೆ ಎಂದು ರಾಜ್ಯ ಉಗ್ರಾಣ ನಿಗಮದ ಜಿಲ್ಲಾ ಗೋದಾಮು ವ್ಯವಸ್ಥಾಪಕಿ ಶರಾವತಿ ತಿಳಿಸಿದರು.

ನಗರದ ಉಗ್ರಾಣ ನಿಗಮ ಮಂಡಳಿ ಘಟಕ ಕೇಂದ್ರಕ್ಕೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಶುಕ್ರವಾರ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಪರಿಶೀಲಿಸಿ, ಜೋಳದಲ್ಲಿ ಹುಳ ತುಂಬಿಕೊಂಡು ಹಾಳಾಗಿರುವುದಕ್ಕೆ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಉಪ ಲೋಕಾಯುಕ್ತರು ಭೇಟಿ ಹಿನ್ನೆಲೆ ಎಚ್ಚೇತ್ತುಕೊಂಡ ಇಲಾಖೆ ಶನಿವಾರ ವಿಜಯನಗರ ಹಾಗೂ ಜಿಲ್ಲೆಯ ವಿವಿಧಡೆಗೆ ಲಾರಿಗಳಲ್ಲಿ ಸಾಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net