ಸಾರಿಗೆ ನೌಕರರ ಸಂಧಾನ ಸಭೆ ವಿಫಲ

Published on

ಬಳ್ಳಾರಿ : ಜಿಲ್ಲೆಯ ಕೆಎಸ್‌ಆರ್‌ಟಿಸಿ ನೌಕರರಿಗೆ ಯಥಾಸ್ಥಿತಿಯಂತೆ ಕರ್ತವ್ಯಕ್ಕೆ ಹಾಜರಾಬೇಕು ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ಇಲಾಖೆಯೂ ಸೂಚಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂದಿನ ಬಾಕಿ ಹಿನ್ನೆಲೆ ಆ. 5ರಂದು ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಇಲಾಖೆಗೆ ಬಂದಿಲ್ಲ. ಆದ್ದರಿಂದ, ಪ್ರತಿಯೊಬ್ಬ ನೌಕರರು ಅವರಿಗೆ ನಿಗದಿಪಡಿಸಿರುವ ಕರ್ತವ್ಯ ಪಾಲಿಸಬೇಕು. ಕರ್ತವ್ಯಕ್ಕೆ ಹಾಜರಾಗದ ನೌಕರರಿಗೆ ವೇತನ ಕಡಿತವಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳಿಗೆ ನೌಕರರೆ ಹೊಣೆಯಾಗಿರುತ್ತಾರೆ. ಜಿಲ್ಲಾದ್ಯಂತ ಒಟ್ಟು ಆರು ಘಟಕಗಳಿದ್ದು ಎಂದಿನಂತೆ ಬಸ್‌ಗಳು ಸಂಚರಿಸಲಿವೆ ಎಂಬುದಾಗಿ ತಿಳಿಸಿದೆ.

ಕೋಟ್... ಸರ್ಕಾರದಿಂದ ಯಾವುದೇ ಸಾರಿಗೆ ನೌಕರರ ಮುಷ್ಕರದ ಆದೇಶ ಬಂದಿಲ್ಲ. ನೌಕರರು ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ವೇತನ ಕಡಿತವಾಗಲಿದೆ.

- ಚಾಮರಾಜ್, ಡಿಟಿಒ, ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net