ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಾಂತ್ರಿಕ ದೋಷ

190722 Hampi Express Train Fire on Engine
ಹಂಪಿ ಎಕ್ಸ್‌ಪ್ರೆಸ್ ರೈಲು ಎಂಜಿನ್‌ನ ಗಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on

ಬಳ್ಳಾರಿ: ಸಂಡೂರು ತಾಲೂಕಿನ ತೊರಣಗಲ್ಲಿನ ಬಳಿ ಸೋಮವಾರ ತಡರಾತ್ರಿ ಹಂಪಿ ಎಕ್ಸ್‌ಪ್ರೆಸ್ ರೈಲು ಎಂಜಿನ್ ಬ್ರೇಕ್‌ನಲ್ಲಿ(ಬೇಕ್ ಜಾಮರ್) ಹೊಗೆ ಜತೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಪ್ರಯಾಣಿಕರಲ್ಲಿ ಆಂತಕದ ವಾತವರಣ ಏರ್ಪಟಿತ್ತು.

ಹುಬ್ಬಳ್ಳಿಯಿಂದ ಬೆಂಗಳೂರಿನ ಕಡೆ ತೆರಳುವಾಗ ರೈಲಿನ ಇಂಜಿನ್ ಹಿಂದಿನ ಭೋಗಿಯ ಚಕ್ರವೊಂದರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಇದನ್ನು ಗಮನಿಸಿದ ಲೋಕೋ ಪೈಲಟ್‌ಗಳು ಮಾಹಿತಿ ನೀಡಿ ರೈಲು ಚಲಿಸದಂತೆ ತಡೆಹಿಡಿದರು. ನಂತರ ಪರಿಶೀಲನೆ ಮಾಡಿ, ಸರಿಪಡಿಸಿದರು. ಇಷ್ಟಲ್ಲ ಆಗುವುದರೊಳಗೆ ಒಂದು ತಾಸು ಸಮಯ ಹಿಡಿದಿದ್ದು, ನಂತರ ರೈಲು ಅಲ್ಲಿಂದ ತೆರಳಿದೆ. ಬಿಗಿ ಬ್ರೇಕ್ ಹಿಡಿದಿದ್ದರಿಂದ ಸಮಸ್ಯೆ ಎದುರಾಗಿತ್ತು ಎಂದು ರೈಲ್ವೆ ಇಲಾಖೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net