ತಿರುಪತಿಯ ಸಿಬ್ಬಂದಿ ಜತೆ ಶಾಸಕ ವಾಗ್ವಾದ

Published on

ಬಳ್ಳಾರಿ : ಆಂಧ್ರದ ತಿರುಪತಿ ತಿಮ್ಮಪ್ಪ ದೇವಸ್ಥಾನದ ಛಾಯಾಚಿತ್ರ ನಿಷೇಧ ಸ್ಥಳದಲ್ಲಿ ನಗರ ಶಾಸಕ ನಾರಾಭರತರೆಡ್ಡಿ ಕುಟುಂಬದವರೊಂದಿಗೆ, ತಮ್ಮ ಬೆಂಬಲಿಗರ ಮೂಲಕ ಪೋಟೋ ತೆಗಿಸಿಕೊಂಡು ವಿವಾದಕ್ಕೆ ಗುರಿಯಾದ ಘಟನೆ ತೆಲುಗುವಾಹಿನಿಗಳ ಮಾಧ್ಯಮಗಳಲ್ಲಿ ವೈರಲ್‌ಯಾಗಿದೆ.

ಶಾಸಕ ನಾರಾಭರತರೆಡ್ಡಿ, ಕುಟುಂಬ ಹಾಗೂ ಬೆಂಬಲಿಗರೊಂದಿಗೆ ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಕಳೆದ ವಾರ ಭೇಟಿ ನೀಡಿದ್ದರು. ನಾರಾಭರತರೆಡ್ಡಿ ದೇವಸ್ಥಾನದಲ್ಲಿ ದರ್ಶನ ಪಡೆಯುವ ವೇಳೆ ಶಾಸಕರ ಬೆಂಬಲಿಗರು ಹೊರಗಡೆ ಫೋಟೋ ತೆಗೆಯುವ ವೇಳೆ ಟಿಟಿಡಿ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಬಳಿಕ ದರ್ಶನ ಪಡೆದು ದೇವಸ್ಥಾನದಿಂದ ಹೊರಗಡೆ ಬಂದ ಶಾಸಕರಿಗೆ ದೇವಸ್ಥಾನದ ಆವರಣದಲ್ಲಿ ಫೋಟೋ ತೆಗಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಟಿಟಿಡಿ ಸಿಬ್ಬಂದಿ ತಿಳಿಸಿದ್ದಾರೆ. ಆದರೂ, ಸಿಬ್ಬಂದಿಯ ಮಾತು ಲೆಕ್ಕಿಸದೆ ನಾರಾಭರತರೆಡ್ಡಿ ಕುಟುಂಬದವರ ಜತೆ ಫೋಟೋಗಳು ತೆಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಟಿಟಿಡಿ ಸಿಬ್ಬಂದಿ ಜತೆ ನಾರಾಭರತರೆಡ್ಡಿ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿರುವ ವಿಡಿಯೋಗಳು ತೆಲುಗು ವಾಹಿನಿಗಳಲ್ಲಿ ಹರಿದಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net