ಮೂರುದಿನ ರಾಜ್ಯಮಟ್ಟದ ಕಥಾಕಮ್ಮಟ -ಜ.13 ರಿಂದ 15 ರವರೆಗೆ ಆಯೋಜನೆ

H.E. Dadakalandar
ಎಚ್.ಇ.ದಾದ ಕಲಂದರ್.
Published on

ಬಳ್ಳಾರಿ: ತಾಲೂಕಿನ ಗಡಿಗ್ರಾಮ, ಆಂಧ್ರದ ಡಿ.ಹಿರೇಹಾಳ್‌ನಲ್ಲಿ ‘ಹಿರೇಹಾಳ್ ಇಬ್ರಾಹಿಂ ಫೌಂಡೇಷನ್’ ವತಿಯಿಂದ ರಾಜ್ಯಮಟ್ಟದ ಕಥಾ ಕಮ್ಮಟ ಜ.13 ರಿಂದ 15ರವರೆಗೆ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಎಚ್.ಇ.ದಾದ ಕಲಂದರ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿರಿಯ ಕಥೆಗಾರ ಎಸ್.ಗಂಗಾಧರಯ್ಯ ಶಿಬಿರದ ನಿರ್ದೇಶಕರಾಗಿರುತ್ತಾರೆ. ಇವರ ಜತೆಯಲ್ಲಿ ಹೆಸರಾಂತ ಸಾಹಿತಿಗಳು ಮಿರ್ಜಾ ಬಾಷ್, ಕೆ.ಪಿ. ನಟರಾಜ್, ಭದ್ರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಸಾಹಿತಿ ರಹಮತ್ ತರಿಕೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯಾದ್ಯಂತ ಶಿಬಿರಾರ್ಥಿಗಳನ್ನು ಅರ್ಜಿ ಮೂಲಕ ಆಹ್ವಾನಿಸಿ, ಆಯ್ಕೆ ಸಮಿತಿಯ ತೀರ್ಮಾನದಂತೆ ಆಯ್ದು, ಕಥಾವಸ್ತುವನ್ನು ಕೊಟ್ಟು ಕಮ್ಮಟದಲ್ಲಿ ಪಾಲ್ಗೂಳ್ಳಲು ತಿಳಿಸಲಾಗುವುದು.

ಆಸಕ್ತರು ತಮ್ಮ ಪರಿಚಯವನ್ನು ಲಗತಿಸಿದ ನಮೂನೆಯಲ್ಲಿ ತುಂಬಿ, ವಾಟ್ಸ್‌ಆಪ್‌ಗೆ 9448670569 ಹಾಗೂ ಇ- ಮೇಲ್(herehalebrahimfoundation@gmail.com) ಗೆ ಡಿ.25ರೊಳಗೆ ಅರ್ಜಿ ಸಲ್ಲಿಸಬೇಕು. ಕಮ್ಮಟದಲ್ಲಿ ಪಾಲ್ಗೊಳ್ಳುವವರಿಗೆ ಊಟ ಮತ್ತು ವಸತಿ ಉಚಿತ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಪಿ.ಅಬ್ದುಲ್, ಕೆ.ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net