ಮೂವರು ಆರೋಪಿಗಳ ಬಂಧನ, 37 ಬೈಕ್ ವಶ

Published on

ಬಳ್ಳಾರಿ : ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ವಿವಿಧಡೆ ಬೈಕ್ ಕಳ್ಳತನ ಎಸಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 18.50 ಲಕ್ಷ ರೂ. ಮೌಲ್ಯದ 37 ಬೈಕ್‌ಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.

ಸಂಡೂರು ತಾಲೂಕಿನ ನಂದಿಹಳ್ಳಿ ಗ್ರಾಮದ ತಿಪ್ಪೇಸ್ವಾಮಿ, ಲಕ್ಷ್ಮೀಪುರ ನಿವಾಸಿಗಳಾದ ಅಂಜಿ, ನಾಗರಾಜ ಬಂಧಿತರು. ತೋರಣಗಲ್ ಬಳಿ ಕಳ್ಳತನ ಮಾಡಿದ್ದ ಬೈಕ್‌ಗಳನ್ನು ಆರೋಪಿಗಳು ಮಾರಾಟ ಮಾಡಲು ಬಂದಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ತನಿಖೆಯಲ್ಲಿ ಜಿಲ್ಲೆಯ ವಿವಿಧಡೆ 37 ಬೈಕ್‌ಗಳು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net