ಅಭಿಮಾನಿಗಳಲ್ಲಿ ದೇವರು ಕಂಡವರು

Published on

ಬಳ್ಳಾರಿ : ಅಭಿಮಾನಿಗಳಲ್ಲಿ ದೇವರನ್ನು ಕಂಡವರು ವರನಟ ಡಾ.ರಾಜ್ ಕುಮಾರ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಟ ಸಾರ್ವಭೌಮ ಡಾ.ರಾಜ್‌ಕುಮಾರ ಅವರ 96ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಟಕ ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ, ಧ್ವನಿ ಏರಿಳಿತದೊಂದಿಗೆ ಜನಸಾಮಾನ್ಯರಿಗೂ ಅರ್ಥ ವಾಗುವಂತೆ ಉಚ್ಚಾರಣೆ ಮಾಡುತ್ತಿದ್ದರು. ನಟನೆಯಲ್ಲಿ ಭಾಷೆಗೆ ಮಹತ್ವ ನೀಡಿ ಶ್ರೀಮಂತಗೊಳಿಸಿದರು.

1980ರಲ್ಲಿ ಕವಿ ಗೋಕಾಕ್ ಅವರ ವರದಿಯಲ್ಲಿ ಶಿಕ್ಷಣದ ತ್ರಿಭಾಷಾ ಪದ್ಧತಿಯಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತಯ ನೀಡಬೇಕು ಎಂದು ಹೇಳಿದ್ದರಿಂದ ಕವಿಗಳ ಅಪೇಕ್ಷೆಯಂತೆ ಗೋಕಾಕ್ ಚಳುವಳಿ ಮುಂಚೂಣಿ ನಾಯಕರಾಗಿ ಬೆಂಗಳೂರಿನಿಂದ ಗೋಕಾಕ್ ವರೆಗೆ ಪಾದಯಾತ್ರೆ ಕೈಗೊಂಡು ಇತಿಹಾಸ ನಿರ್ಮಿಸಿದರು.

ಕನ್ನಡ ನೆಲ, ಜಲ, ಗಡಿ, ಭಾಷೆಯ ಅಪ್ಪಟ ಅಭಿಮಾನಿಗಳಾಗಿದ್ದರು. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಕನ್ನಡದ ಏಕೈಕ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ನಟಿಸಿದ ಬೇಡರ ಕಣ್ಣಪ್ಪ, ಬಬ್ರುವಾಹನ, ಭಕ್ತಕನಕದಾಸ, ಕೃಷ್ಣದೇವರಾಯ, ಭಕ್ತ ಕುಂಬಾರ, ಒಡಹುಟ್ಟಿದವರು ಹೀಗೆ ಅನೇಕ ಸಿನಿಮಾಗಳು ಜನಮೆಚ್ಚಿಗೆ ಪಡೆದಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net