ಬಳ್ಳಾರಿ : ಇಡೀ ಜಗತ್ತು ಇಂದು ಹಿಂದುಯಿಸಂ ಕಡೆ ಒಲವು ತೋರುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಹಿಂದುತ್ವದ ಬಗ್ಗೆ ನೆಗೆಟೀವ್ ಮಾಡಲಾಗುತ್ತಿದೆ ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೋದಿ ಅವರು ಪ್ರಧಾನಿ ನಂತರ ಜಗತ್ತಿನಲ್ಲೇ ಬೇರೆ ವಾತಾವರಣ ನಿರ್ಮಾಣ ಆಗಿದೆ. ಚರ್ಚ್‌ಗಳು ಮಾರಾಟವಾಗಿ, ಅಲ್ಲಿ ದೇವಸ್ಥಾನ ಆಗುತ್ತಿವೆ. ನಮ್ಮ ಪುತ್ತಿಗೆ ಸ್ವಾಮಿಗಳು ಚರ್ಚ್ ಅನ್ನ ತೆಗೆದುಕೊಂಡು ಕೃಷ್ಣನ ಮಂದಿರ ಮಾಡಿದ್ದಾರೆ ಎಂದರು.
ಧರ್ಮ ಪ್ರಚಾರ ಮಾಡುವ ಯಾವುದೇ ಸ್ವಾಮಿಗಳೆ ಮೇಲೆ ಹಣ, ಹೆಣ್ಣುಮಕ್ಕಳನ್ನ ಇಟ್ಟುಕೊಂಡು ಷ್ಯಡ್ಯಂತ್ರ ಮಾಡುತ್ತಿದ್ದಾರೆ. ವಿದೇಶಿಯ ಕೆಲವು ಶಕ್ತಿಗಳು ಹಣ ಹೂಡಿಕೆ ಮಾಡಿ ಭಾರತದ ಧರ್ಮ ಶ್ರದ್ಧೆ ಹಾನಿ ಮಾಡುತ್ತಿದ್ದಾರೆ. ಮಠಾಧೀಶರು, ಧರ್ಮಾಧಿಕಾರಿಗಳ ಬಗ್ಗೆ ಜನರಲ್ಲಿ ನಕಾರಾತ್ಮಕತೆ ಹುಟ್ಟಿಸಿ, ಜಗಳ ಹಚ್ಚುತ್ತಿದ್ದಾರೆ. ಹೀಗಾಗಿ ಕೇಂದ್ರ ಸಚಿವ ಅಮಿತ್ ಷಾ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಎಂದರು.
ಧರ್ಮಸ್ಥಳ ಪ್ರಕರಣ ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ಆಗುತ್ತಿದೆ. ಮುಖ್ಯ ಚಾನಲ್‌ಗಳಲ್ಲಿ ಹಿಡನ್ ಅಜೆಂಡ ಇಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತದೆ. ಧರ್ಮಸ್ಥಳದ ಬಗ್ಗೆ ಮಾತಾಡಿದನಲ್ಲ ಯು ಟ್ಯೂಬರ್ ಅವನು ಹಿಂದು ಅಲ್ಲ, ಮುಸ್ಲಿಂ. ಅವನಿಗೆ ಇನ್ನೂ ಮೀಸೆ ಬಂದಿಲ್ಲ, ತಲೆ ಮಾಸಿಲ್ಲ. ಅವನೇನು ಧರ್ಮಸ್ಥಳಕ್ಕೆ ಬಂದಿದ್ದನಾ? ಕಾಣಿಕೆ ಕೊಟ್ಟಾನ? ಅವನಿಗೆ ಏನು ಸಂಬಂಧ?. ಅವನು ಮಸೀದಿ ಬಗ್ಗೆ, ಇಸ್ಲಾಂ ಬಗ್ಗೆ, ಇರಾನ್ ಅಲ್ಲಿ ಏನ್ ನಡಿತಾ ಇದೆ, ಮುಸ್ಲಿಂ ರಾಷ್ಟ್ರದಲ್ಲಿ ಏನ್ ನಡಿತಾ ಇದೆ ಎನ್ನುವ ಬಗ್ಗೆ ಮಾತಾಡ್ತಾರಾ ಎಂದು ಪ್ರಶ್ನಿಸಿದರು.