ಬಳ್ಳಾರಿ : ಜಿಲ್ಲೆಯ ಐವರ ಬಾಣಂತಿಯರ ಸಾವಿಗೆ ಸದ್ಯ ನೀಡಿರುವ ಐವಿ ದ್ರಾವಣದ ವರದಿಯು ಉಹಾಪೂಹವಾಗಿದೆ. ಇನ್ನೂ ಅಧಿಕೃತ ವರದಿ ಬರಬೇಕಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಬಾಣಂತಿಯರ ಸಾವಿನ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ವರದಿ ಬಹಿರಂಗವಾಗಲಿದೆ. ಅಲ್ಲದೆ, ಐವರ ಬಾಣಂತಿಯರ ಸಾವಿನ ಮೃತ ಕುಟುಂಬಗಳಿಗೆ ಇನ್ನೂ ಕೆಲ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿಲ್ಲ ಎಂದು ಕಿಡಿಕಾರಿದರು. ಚೆಕ್ ವಿತರಿಸಲು ಜನಪ್ರತಿನಿಧಿಗಳು ಅಗತ್ಯವಿಲ್ಲ ಅಧಿಕಾರಿಗಳೆ ಮನೆಗೆ ಹೋಗಿ ತಲುಪಿಸಲು ಸೂಚಿಸಲಾಗಿದೆ ಎಂದರು. ಮೃತ ಬಾಣಂತಿಯರ ಮಕ್ಕಳಿಗೆ ಸರ್ಕಾರ ಉನ್ನತ ಶಿಕ್ಷಣ ಒದಗಿಸಿ ಸರ್ಕಾರಿ ನೌಕರಿ ಕೊಡಿಸುವ ಜವಾಬ್ದಾರಿಯನ್ನು ಸರ್ಕಾವೇ ಹೊರಬೇಕು. ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ಕುಡಿಯುವ ನೀರು ಕಲುಷಿತಗೊಂಡಿದ್ದು, ನೀರು ಪರೀಕ್ಷಿಸಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗುವುದು ಎಂದರು. ಜಿಲ್ಲೆಯ ಎರಡು ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದು ಶಾಲಾ ಕೊಠಡಿಗಳು ಶಿಥಿಲಾ ವ್ಯವಸ್ಥೆ ತಲುಪಿದ್ದು ಕೆಲ ಶೌಚಾಲಯಗಳು ದುಸ್ಥಿತಿಯಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ಹದಿನೈದು ಪೌರ ಕಾರ್ಮಿಕರಲ್ಲಿ ಹನ್ನೊಂದು ಪೌರ ಕಾರ್ಮಿಕರಿಗೆ ಸ್ತನ ಕ್ಯಾನ್ಸರ ಕಾಯಿಲೆ ಕಾಣಿಸಿಕೊಂದೆ ಇದೊಂದು ದೊಡ್ಡ ದುರಂತವಾಗಿದೆ. ಈ ಪೌರ ಕಾರ್ಮಿಕರಿಗೆ ಜಿಲ್ಲಾ ಆರೋಗ್ಯ ಇಲಾಖೆ ಏನೆಲ್ಲ ಕ್ರಮವಹಿಸಿದೆ ಎಂಬುದು ತಿಳಿಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆಯಿದ್ದು ಹಲವು ಮಕ್ಕಳು ಕಾಯಿಲೆಗೆ ತುತ್ತಾಗುತ್ತಿದ್ದರೆ ಎಂದು ಮಾಹಿತಿ ನೀಡಿದರು. ಪರಿಸರ ಮಾಲಿನ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ವರದಿ ನೀಡುವಂತೆ ಸೂಚಿಸಿದರೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದರು. ಜಿಲ್ಲೆಯ ಎರಡು ದಿನದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ತಪ್ಪಿಸ್ತರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
=====