ಸಾಹಿತ್ಯದಲ್ಲಿ ಸಾಮಾನ್ಯರ ಬದುಕು

Published on

ಬಳ್ಳಾರಿ ; ಸಮುದಾಯದ ಬದುಕಿನ ಚಿತ್ರಣವನ್ನು ವೈವಿಧ್ಯಮಯವಾಗಿ ರೂಪಿಸಿಕೊಳ್ಳುವಲ್ಲಿ ವಿಚಾರ ಸಂಕಿರಣಗಳು ಅವಶ್ಯ ಎಂದು ಶ್ರೀ ಸತ್ಯಂ ಶಿಕ್ಷಣ ಕಾಲೇಜಿನ ಪ್ರೊ. ಅಲಂಭಾಷ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಂಗ ಜಂಗಮ ಸಂಸ್ಥೆ, ಆದಿವಾಸಿ ಸಾಹಿತ್ಯ ಕಲೆ ಮತ್ತು ಸಂಶೋಧನಾ ಟ್ರಸ್ಟ್ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರೊ.ಎಸ್.ಶಾಂತನಾಯ್ಕೊ ಅವರ ಕಥೆಗಳಲ್ಲಿ ಬದುಕಿನ ಚಿತ್ರಣಗಳ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಗಳಲ್ಲಿ ಸಾಮಾನ್ಯ ಜನರ ಬದುಕಿನ ಚಿತ್ರಣವನ್ನು ಕಾಣಬಹುದು. ಸ್ತ್ರೀಯರಿಗೆ ಶಿಕ್ಷಣದ ಅವಶ್ಯಕತೆಯಿದೆ. ಅವರು ಸಾಹಿತ್ಯಗಳನ್ನು ಓದುವುದರ ಮುಖಾಂತರ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲೆ ಡಾ.ಕೆ.ವಿ.ಪ್ರಜ್ಞಾ ಮಾತನಾಡಿ, ಕವಿಯ ಆಲೋಚನೆಯನ್ನು ಓದುಗರು ಮಾತ್ರ ಮುಟ್ಟಲು ಸಾಧ್ಯ. ಸಾಮಾನ್ಯ ಭಾಷೆಯನ್ನು ಬಳಸಿ ಕಾವ್ಯವನ್ನು ರಚಿಸುವುದು ಅಕ್ಷರಗಳ ಜ್ಞಾನ ಇದ್ದವರಿಗೆ ಮಾತ್ರ ಸಾಧ್ಯ ಎಲ್ಲರೂ ಕಾವ್ಯವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಬದುಕಿನ ಬಣ್ಣಗಳ ದಿನನಿತ್ಯದ ಘಟನೆಗಳನ್ನು ಭಾಷೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಲೇಖಕರು ಮಾಡಿದ್ದಾರೆ. ಸಾಹಿತ್ಯಕ್ಕೆ ಅಕ್ಷರದ ರೂಪವನ್ನು ನೀಡಿ ಓದುಗರ ಮನಸ್ಸಿಗೆ ಆಹ್ಲಾದ ನೀಡಿದ್ದಾರೆ ಎಂದರು.

ವಿಎಸ್‌ಕೆ ವಿವಿ ಪ್ರೊ. ಡಾ.ಕೆ.ಶಕೀಲಾ ವಿಶೇಷ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net