ಬಳ್ಳಾರಿ ; ಪಂ. ಪುಟ್ಟರಾಜ ಗವಾಯಿಗಳು ಅಂದ ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು ಎಂದು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಶ್ರೀ ಪಂ. ಪುಟ್ಟರಾಜ ಕವಿ ಗವಾಯಿಗಳ ಶಿಷ್ಯ ಬಳಗದಿಂದ ಶನಿವಾರ ಆಯೋಜಿಸಿದ್ದ ಪಂ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯ ಸ್ಮರಣೋತ್ಸವ, ಗುರುನಮನ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ, ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗವಾಯಿಗಳು ಸಂಗೀತವನ್ನು ನೀವು ಉಳಿಸಿ ಸಂಗೀತ ನಿಮ್ಮನ್ನು ಉಳಿಸುತ್ತದೆ ಎಂಬುದು ಗವಾಯಿಗಳ ಮಾತು ಅಕ್ಷರಶಃ ನಿಜವಾಗಿದೆ ಎಂದರು.
ಸಂಗೀತ ಶಿಕ್ಷಕ ವಿ.ಎಂ.ವೀರಭದ್ರಯ್ಯ ಗವಾಯಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಮಾತು ಅಕ್ಷರ ಸಹ ಸತ್ಯ. ಅಂದರ ಬಾಳಲ್ಲಿ ಸಂಗೀತವು ಬೆಳಕನ್ನು ಚೆಲ್ಲಿದೆ ಇದಕ್ಕೆ ಮೂಲ ಕಾರಣ ನಡೆದಾಡುವ ದೇವರಾದರು. ಕಾಯಕವೇ ಕೈಲಾಸವಯ್ಯ ಎಂಬ ಶರಣರ ವಾಣಿಯನ್ನ ಅನುಷ್ಠಾನ ಗೊಳಿಸಿದ ಮಹಾನ್ ವ್ಯಕ್ತಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಭಾರತೀಯ ಪರಂಪರೆಯಲ್ಲಿ ಹಿಂದುಸ್ತಾನಿ ಸಂಗೀತ ವಿಶೇಷವಾದದ್ದು ಮನಸ್ಸು ಅರಳುವಂತಹ ಸಂಗೀತ ಕೇಳಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಹಿರಿಯ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಅವರಿಗೆ ವಚನಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು