ಪ್ರತಿಭೆ ಅರಳಲು ಸಂಚಿಕೆ ಸಹಕಾರಿ

Published on

ಬಳ್ಳಾರಿ : ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ, ಅರಳಿ ಬೆಳಗುವಲ್ಲಿ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆಗಳ ಪಾತ್ರ ಮಹತ್ವದ್ದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯರಾಮ ಹೇಳಿಕೆ

ಇಲ್ಲಿನ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ಚಿಲುಮೆಯನ್ನು ವಿದ್ಯಾರ್ಪಣೆಗೊಳಿಸಿ ಮಾತನಾಡಿದರು.

ಯುವ ಸಮುದಾಯ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೆತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಲೇಖಕ ಸಿದ್ದರಾಮ ಕಲ್ಮಠ ಮಾತನಾಡಿ, ಚಿಲುಮೆ ಕಾಲೇಜಿನ ಸೃಜನಶೀಲತೆ ಮತ್ತು ಸಾಧನೆಗೆ ಹಿಡಿದ ಕೈಗನ್ನಡಿ. ವಿದ್ಯಾರ್ಥಿಗಳಿಗೆ ಬರವಣಿಗಯ ಹವ್ಯಾಸವನ್ನು ರೂಡಿಸಿಕೊಳ್ಳಲು ಇದು ಪ್ರೇರಣೆಯನ್ನು ನೀಡುತ್ತದೆ. ಈ ಸಂಚಿಕೆಯಲ್ಲಿ ವಿಷಯ ಮತ್ತು ಭಾಷಾ ವೈವಿಧ್ಯತೆಯನ್ನು ಕಾಣಬಹುದು. ಅರಿವಿನ ಕೊರತೆಯನ್ನು ನೀಗಿಸುವಲ್ಲಿ ಇದು ಸಾರ್ಥಕ ಕೆಲಸ ಮಾಡುವಂತಿದೆ ಎಂದರು.

ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಉತ್ಸಾಹ, ಲವಲವಿಕೆ, ಸೃಜನಶೀಲತೆ ಇಂದು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು ನಾಳಿನ ದಿನಗಳಲ್ಲಿ ಸೃಜನಶೀಲ ಮನೋಭಾವವನ್ನು ರೂಢಿಸಿಕೊಂಡು ಪ್ರತಿಭೆಯನ್ನು ಮೆರೆಯಬೇಕೆಂದರು.

ಪ್ರಾಂಶುಪಾಲ ಡಾ. ಪ್ರಹ್ಲಾದ ಚೌದ್ರಿ ಮಾತನಾಡಿ, ಇಂತಹ ಸಂಚಿಕೆಗಳು ವಿದ್ಯಾರ್ಥಿಗಳಿಗೆ ಹೊಸ ಸ್ಪೂರ್ತಿಯನ್ನು, ಪ್ರೇರಣೆಯನ್ನು ನೀಡುತ್ತವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net