ಬಳ್ಳಾರಿ : ಜಿಲ್ಲಾಸ್ಪತ್ರೆಯ ಮಕ್ಕಳತಜ್ಞ ಡಾ. ಸುನೀಲ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟನೇ ಆರೋಪಿ ಇಲ್ಲಿನ ಗಾಂಧಿನಗರದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಶರಣಾಗತಿಯಾಗಿದ್ದಾರೆ. ಮಹಾನಗರ ಪಾಲಿಕೆಯ ಮಾಜಿ ಸದಸ್ಯನ ಪುತ್ರ ನೇರವಾಗಿ ಠಾಣೆಗೆ ಹಾಜರಾಗಿದ್ದಾನೆ ಎಂಬುದಾಗಿ ಮೂಲಗಳು ತಿಳಿಸಿದವು.
ಏನಿದು ಘಟನೆ : ಕಳೆದ ವಾರ ಬೆಳ್ಳಂಬೆಳಗ್ಗೆ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಸುನೀಲ್ ಕುಮಾರ ಅವರನ್ನು ಅಪಹರಿಸಿ ಆರು ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಬಳಿಕ ಸಂಜೆವೇಳೆ ವೈದ್ಯನಿಗೆ ಅಪಹರಣಾಕರೇ 300 ರೂ. ನೀಡಿ ಬಿಟ್ಟು ಹೋಗಿದ್ದರು. ಸದ್ಯ ಅಪಹರಣದ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.