ಬಯಲಾಟಕ್ಕೆ ಜಿಲ್ಲೆ ಪ್ರಸಿದ್ಧಿ

Published on

ಬಳ್ಳಾರಿ ; ಜಿಲ್ಲೆಗೆ ಬಯಲಾಟವು ಪ್ರಸಿದ್ಧಿಯಾಗಿದ್ದು, ಕಲೆಯನ್ನು ಉಳಿಸಿ - ಬೆಳೆಸಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕಸಾಪ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕರ್ನಾಟಕ ಆಂಧ್ರಗಡಿ ಪ್ರದೇಶದ ಕನ್ನಡ ಬಯಲಾಟಗಳು ಎರಡು ದಿನಗಳ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದಲ್ಲದೆ ಹಲವು ಬಯಲಾಟ ಕಲಾವಿದರ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎಂದರು.

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ದುರ್ಗಾದಾಸ ಮಾತನಾಡಿ, ಬಯಲಾಟ ಕಲೆಯನ್ನು ಜನಮಾನಸಕ್ಕೆ ತಲುಪಿಸುವ ಮತ್ತು ಯುವಕರನ್ನು ಬಯಲಾಟಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವಲ್ಲಿ ಅಕಾಡೆಮಿಯು ಕ್ರಿಯಾ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ಪ್ರಮುಖರಾದ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಸಂಚಾಲಕ ಡಾ. ದೇವೇಂದ್ರಪ್ಪ, ಸಾಹಿತಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net