ಶಿಲಾಯುಗದ ಮೂರನೇ ಬೂದಿದಿಬ್ಬ ನಾಶ

Published on

ಬಳ್ಳಾರಿ : ತಾಲೂಕಿನ ಸಿರಿವಾರ ಗ್ರಾಪಂ ಒಳಪಡುವ ಅಂದಾಜು ನಾಲ್ಕರಿಂದ ಐದು ಸಾವಿರ ವರ್ಷಗಳ ಹಿಂದಿನ ಬೂದಿ ದಿಬ್ಬ ನಾಶಗೊಂಡಿದ್ದು ಡಿಸಿ ಆದೇಶದ ಮೇರೆಗೆ ಸ್ಥಳೀಯ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಿರಿವಾರ ಗ್ರಾಮಕ್ಕೆ ಒಳಪಡುವ ಸರ್ವೆ ನಂ 160(ಬಿ) ಭೂಮಿಯಲ್ಲಿ ಬೂದಿದಿಬ್ಬ ಇತ್ತು. ಈ ಪಟ್ಟಾ ಭೂಮಿಯು ವೆಂಕಟೇಶ್ವರಲು ಮತ್ತು ವೆಂಕಟರಾಯುಡು ಎಂಬುವವರ ಜಂಟಿ ಒಡೆತನದಲ್ಲಿದೆ. ಜಮೀನಿನಲ್ಲಿದ್ದ ಗುಂಡಿಯನ್ನು ಮುಚ್ಚಿ ಜಮೀನು ಸಮತಟ್ಟು ಮಾಡಲು ದಿಬ್ಬವನ್ನು ನಾಶ ಮಾಡಲಾಗಿದೆ ಎನ್ನಲಾಗಿದೆ. ಸಂಗನಕಲ್ಲು ನಿವೇಶನ ಸಂಕೀರ್ಣ ಸಂರಕ್ಷಿತ ತಾಣವೆಂದು ಘೋಷಣೆಯಾಗುವುದಕ್ಕೆ ಮೊದಲೇ ಇಲ್ಲಿ ಎರಡು ಬೂದಿ ದಿಬ್ಬಗಳು ದ್ವಂಸಗೊಂಡಿದ್ದವು. ಸದ್ಯ ಮೂರನೇ ದಿಬ್ಬವೂ ಧ್ವಂಸಗೊಂಡಿದೆ.

ಸ್ಥಳಕ್ಕೆ ಭೇಟಿ ನೀಡಿದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಗೈತಿಹಾಸಿಕ ವಸ್ತುಸಂಗ್ರಾಹಾಲಯದ ಸದಸ್ಯರು ನೆಲಸಮವಾಗಿರುವುದನ್ನು ವಿಷಯವನ್ನು ಜಿಲ್ಲಾಡಳಿತ, ರಾಜ್ಯ ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net