ಹುದ್ದೆ ದೊರೆಯುವ ಶಿಕ್ಷಣ ಬೋಧಿಸಿ

Published on

ಬಳ್ಳಾರಿ : ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಶಿಕ್ಷಣ ಬೋಧಿಸಬೇಕು. ಕೈಗಾರಿಕೆ ಮತ್ತು ಶಿಕ್ಷಣಸಂಸ್ಥೆಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಪಠ್ಯಕ್ರಮ ರಚಿಸಲು ಸಹಕಾರಿಯಾಗುತ್ತದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ನಗರದ ವಿಎಸ್‌ಕೆ ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸ್ನಾತಕ ಪದವಿಯ ಉಪನ್ಯಾಸಕರಿಗೆ ಪ್ರಾಣಿಶಾಸ್ತ್ರ ವಿಷಯದ ಪಠ್ಯಕ್ರಮ ಮೌಲ್ಯಮಾಪನ ಮತ್ತು ಪ್ರಶ್ನೆ ಪತ್ರಿಕೆ ಕುರಿತಾಗಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿದರು. ಅದಕ್ಕೆ ಪೂರಕವಾದ ತಂತ್ರಜ್ಞಾನವನ್ನು ಬಳಸಬೇಕು. ವಿವಿಯ ಎಲ್ಲ ವಿಭಾಗಗಳು ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲವ್ಯಕ್ತಿಗಳಾದ ನಿವೃತ್ತ ಪ್ರೊ.ಡಾ.ಎನ್.ಎಸ್. ಸುರೇಶ, ಸಹಾಯಕ ಪ್ರಾಧ್ಯಾಪಕ ಡಾ. ಎನ್.ಗೋಪಾಲ್ ಪಠ್ಯಕ್ರಮ ಕುರಿತಾದ ರಚನೆಯ ಬಗ್ಗೆ, ಪಶ್ನೆ ಪತ್ರಿಕೆ ರಚನೆ ಮತ್ತು ಮೌಲ್ಯಮಾಪನ ಕುರಿತಾದ ವಿಷಯಗಳನ್ನು ಚರ್ಚಿಸಿ, ಮೌಲ್ಯಮಾಪನವಿಲ್ಲದೆ ಬೋಧನೆ ಕೊನೆಯಾಗುವುದಿಲ್ಲ ಎಂದು ತಿಳಿಸಿದರು.

ಬಳಿಕ ಎಂಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ದೀಕ್ಷಾ ಮತ್ತು ಶ್ವೇತ ಇವರು ಕೆಎಸ್‌ಇಟಿ ಪರೀಕ್ಷೆ ತೇರ್ಗಡೆ ಹೊಂದಿದ ಹಿನ್ನೆಲೆಯಲ್ಲಿ ವಿಭಾಗದಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net