ರೈತರು ಸಾವಯುವ ಕೃಷಿ ಕೈಗೊಳ್ಳಿ

Published on

ಬಳ್ಳಾರಿ : ಮಣ್ಣು ಜೀವಂತವಾಗಿರಲು ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮ ಜೀವಿಗಳೂ ಇರಬೇಕು. ಆದ್ದರಿಂದ, ರಾಸಯನಿಕ ಕೃಷಿ ಬಿಟ್ಟು ಸಾವಯುವ ಕೃಷಿ ಕೈಗೊಳ್ಳಿ ಎಂದು ಹಗರಿಯ ಕೆವಿಕೆ ಕಾಲೇಜಿನ ಪ್ರೊ.ಡಾ.ರಾಜೇಶ್ವರಿ ಹೇಳಿದರು.

ತಾಲೂಕಿನ ಚೆಳ್ಳಗುರ್ಕಿಯ ಶ್ರೀ ಎರ‌್ರಿಸ್ವಾಮಿ ದಾಸೋಹ ಸಂಘದ ಆವರಣದಲ್ಲಿ ಮೈರಾಡ ಯೋಜನೆ, ಬೇಕರ್ ಹ್ಯೂಸ್ ಕಂಪನಿ ಮತ್ತು ಶ್ರೀ ಎರ‌್ರಿಸ್ವಾಮಿ ಜಲಾನಯನ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಣ್ಣಿ ಇಂಗಾಲವನ್ನು ಹೆಚ್ಚಿಸಲು ಹಸಿರೆಲೆ ಗೊಬ್ಬರ, ಸಾವಯುವ ಅಂಶಗಳನ್ನು ಹೆಚ್ಚಾಗಿ ರೈತರು ಅಳವಡಿಸಿಕೊಳ್ಳಬೇಕು. ಏಕಬೆಳೆ ಪದ್ದತಿಯನ್ನು ಬಿಟ್ಟು ನಿರಂತರ ಅದಾಯ ನೀಡುವ ಸುಸ್ಥಿರ ಕೃಷಿಯನ್ನು ರೈತರು ಪಾಲಿಸಬೇಕು ಎಂದು ತಿಳಿಸಿದರು.

ಶ್ರೀ ಎರ‌್ರಿಸ್ವಾಮಿ ಜಲಾನಯನ ಅಭಿವೃದ್ಧಿ ಅಧ್ಯಕ್ಷ ಸಿ.ಎಂ.ಜಗದೀಶ್ ಮಾತನಾಡಿ, ಮೈರಾಡ ಯೋಜನೆಯ ಕಾರ್ಯಗಳು ರೈತರಿಗೆ ಅನುಕೂಲವಾಗಿವೆ. ಮಣ್ಣಿನಿಂದಲೇ ನಾವೆಲ್ಲ ನಮ್ಮ ಜೀವನ ಅದನ್ನು ನಾವು ಉಳಿಸಿ ಆರೋಗ್ಯವಾಗಿಡುವುದು ನಮ್ಮ ಅದ್ಯ ಕರ್ತವ್ಯವಾಗಿದೆ. ಮಣ್ಣಿನ ಸಂರಕ್ಷಣೆ, ಸಾವಯುವ ಕೃಷಿ ವಿಧಾನಗಳ ಬಳಕೆಯನ್ನು ರೈತರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈರಾಡ ಯೋಜನೆಯ ಅಧಿಕಾರಿ ಎಸ್.ವೆಂಕಟರೆಡ್ಡಿ, ತೋಟಗಾರಿಕೆ ಸಹಾಯಕ ಅಧಿಕಾರಿ ಎನ್.ಪ್ರವೀಣ್‌ಕುಮಾರ, ಉಪವಲಯ ಅರಣ್ಯಧಿಕಾರಿ ಪಂಪಾಪತಿ ನಾಯಕ ಮಾತನಾಡಿದರು. ಬಳಿಕ ಸಾಯಿಲ್ ಟ್ರಸ್ಟ್ ಅವರಿಂದ ಮಣ್ಣಿನ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net