ಮರು ತನಿಖೆ ನಡೆಸಲು ಸಿಂಡಿಕೇಟ್ ಸಭೆ ನಿರ್ಣಯ

Published on

ಬಳ್ಳಾರಿ : ಇಲ್ಲಿನ ವಿಎಸ್ ಕೆ ವಿವಿಯಲ್ಲಿ ನಡೆದಿರುವ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಕುಲಪತಿಗಳ ನೇತೃತ್ವದಲ್ಲಿ ಮತ್ತೊಮ್ಮೆ ತನಿಖೆ ನಡೆಸುವಂತೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಘಟಿಕೋತ್ಸವ ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಸಮಿತಿಯೊಂದನ್ನು ನೇಮಿಸಿದ್ದು, ಈಗಾಗಲೇ ಪರಿಶೀಲನೆ ನಡೆಸಿದೆ. ಜತೆಗೆ ಶುಕ್ರವಾರ ವಿವಿಯಲ್ಲಿ ನಡೆದ ಸಿಂಡಿಕೇಟ್ ಸಭೆಗೂ ಸಮಿತಿಯು ಮಧ್ಯಂತರ ವರದಿ ನೀಡಿದೆ. ಶೀಘ್ರದಲ್ಲೇ ಪೂರ್ಣ ವರದಿಯನ್ನು ನೀಡಲೂ ಸಮಿತಿಯು ಸಿದ್ಧತೆ ನಡೆಸಿದೆ. ಆದರೂ, ಸಮಿತಿಯ ಸದಸ್ಯರು, ನಿವೃತ್ತ ಕುಲಪತಿಗಳನ್ನು ನೇಮಿಸಿ, ಪುನಃ ತನಿಖೆ ನಡೆಸುವಂತೆ ಸಿಂಡಿಕೇಟೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net