ಸ್ವಾರ್ ಏರ್ ವಿಮಾನ ಸೇವೆ ನ.1ಕ್ಕೆ ಆರಂಭ

Published on

ಬಳ್ಳಾರಿ : ಸಂಡೂರು ತಾಲೂಕಿನ ತೋರಣಗಲ್‌ನ ವಿದ್ಯಾನಗರದಲ್ಲಿರುವ ಜಿಂದಾಲ್ ವಿಮಾನ ನಿಲ್ದಾಣದಿಂದ ’ಸ್ಟಾರ್ ಏರ್ ’ ವಿಮಾನಯಾನ ಕಂಪನಿಯು ನವೆಂಬರ್.1 ರಿಂದ ಬೆಂಗಳೂರು - ಬಳ್ಳಾರಿ ನಡುವೆ ವಿಮಾನ ಸೇವೆ ಆರಂಭಿಸಲಿದೆ.

ಬೆಂಗಳೂರಿನಿಂದ ವಿದ್ಯಾನಗರಕ್ಕೆ ನಿತ್ಯ ಬೆಳಗ್ಗೆ 7.50ಕ್ಕೆ ವಿಮಾನ ಸೇವೆ ಲಭ್ಯವಾಗಲಿದೆ. ವಿದ್ಯಾನಗರದಿಂದ ಬೆಂಗಳೂರಿಗೆ ನಿತ್ಯ ಬೆಳಗ್ಗೆ 9.10ಕ್ಕೆ ವಿಮಾನ ಸೇವೆ ಇರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಮಾನ ನಿಲ್ದಾಣದಿಂದ ಏರ್ ಅಲೆನ್ಸ್ ಕಂಪನಿಯು ಬೆಂಗಳೂರು ಹಾಗೂ ಹೈದರಾಬಾದ್ ಗೆ ತೆರಳುತ್ತಿದ್ದ ವಿಮಾನ ಸಂಚಾರ ಪ್ರಯಾಣಿಕರ ಕೊರತೆ ನೆಪವೊಡ್ಡಿ ಕಳೆದ ಒಂದು ತಿಂಗಳಿಂದ ಸ್ಥಗಿತಗೊಳಿಸಲಾಗಿತ್ತು. ಸದ್ಯ, ಈ ಸ್ಟಾರ್ ವಿಮಾನ ಸೇವೆಯಿಂದ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮಕ್ಕೆ ಬೆಳವಣಿಗೆ ಸಾಕಷ್ಟು ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net