ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

Published on

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ ನಾನಾ ವಾರ್ಡ್‌ಗಳ ರಸ್ತೆ ಹಾಗೂ ವೃತ್ತಗಳಿಗೆ ಮರುನಾಮಕರಣ ಮಾಡಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಲ್ಲಿಸಬಹುದು. ಪಾಲಿಕೆ ವ್ಯಾಪ್ತಿಯ ೦೫ ನೇ ವಾರ್ಡ್‌ನ ಕಾರ್ಕಲತೋಟ ಮುಖ್ಯ ರಸ್ತೆಯಲ್ಲಿನ (ಸರಕಾರಿ ಶಾಲೆ ಹಿಂ‘ಾಗ) ವೃತ್ತವನ್ನು ನಂದಮೂರಿ ತಾರಕ ರಾಮರಾವ್ ವೃತ್ತ ಮತ್ತು ಕಾರ್ಕಲತೋಟ ಮುಖ್ಯ ರಸ್ತೆಯನ್ನು ನಂದಮೂರಿ ತಾರಕ ರಾಮರಾವ್ ರಸ್ತೆ ಎಂದು ನಾಮಕರಣ, ವಾರ್ಡ್ ನಂ.೦೮ ರ ಆಕ್ಟಾಯ್ ವೃತ್ತವನ್ನು ಗೋಮಾತಾ ವೃತ್ತ ಎಂದು, ಕೌಲ್ ಬಜಾರ್ ರಸ್ತೆಯ ಒಂದನೇ ರೈಲ್ವೇ ಗೇಟ್ ಹತ್ತಿರದ (ಫ್ಲೈಓವರ್) ಇರುವ ವೃತ್ತವನ್ನು ಶ್ರೀಮೌಲಾನ ಅಬ್ದುಲ್ ಕಲಾಂ ಅಜಾದ್ ವೃತ್ತ ಎಂದು ನಾಮಕರಣ ಮಾಡುವುದಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸ‘ೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳಿದ್ದಲ್ಲಿ ೩೦ ದಿನದೊಳಗೆ ಲಿಖಿತ ರೂಪದಲ್ಲಿ ಪಾಲಿಕೆ ಕಚೇರಿಗೆ ಸಲ್ಲಿಸಬಹುದು. ನಿಗದಿತ ಅವಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದಲ್ಲಿ ಸರಕಾರದ ಸುತ್ತೋಲೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net