ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ರಸ್ತೆ ಹಾಗೂ ವೃತ್ತಗಳಿಗೆ ಮರುನಾಮಕರಣ ಮಾಡಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳೆದ್ದರೆ ಸಲ್ಲಿಸಬಹುದು. ಪಾಲಿಕೆ ವ್ಯಾಪ್ತಿಯ 1 ನೇ ವಾರ್ಡ್‌ನ ತಾಳೂರು ರಸ್ತೆಯ ಡಾ.ಪುನೀತ್ ರಾಜ್‌ಕುಮಾರ ರಸ್ತೆಯ ವೃತ್ತವನ್ನು ಶ್ರೀಮಹಾಯೋಗಿ ವೇಮನ ವೃತ್ತ, ವಾರ್ಡ್ ನಂ.25 ರೇಡಿಯೋ ಪಾರ್ಕ್ ವೃತ್ತವನ್ನು ಶ್ರೀ ಕೆ.ಭಾಸ್ಕರ್ ನಾಯ್ಡು ವೃತ್ತ ಮತ್ತು ನಗರದ ಸರ್ಕಾರಿ ಬಾಲಕಿಯರ ಕಾಲೇಜು ರಸ್ತೆಗೆ ಸಾವಿತ್ರಿ ಬಾಯಿ ಫುಲೆ ರಸ್ತೆ, ಬಸವೇಶ್ವರ ನಗರದ 2ನೇ ಮುಖ್ಯ ರಸ್ತೆಯ ವೃತ್ತಕ್ಕೆ ಶ್ರೀಆದಿಜಗದ್ಗುರು ರೇಣುಕಾಚಾರ್ಯ ವೃತ್ತ ಎಂದು ನಾಮಕರಣ ಮಾಡುವುದಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ 30 ದಿನದೊಳಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಪಾಲಿಕೆ ಕಚೇರಿಗೆ ಸಲ್ಲಿಸಬಹುದು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.
===